ಬಾಂಡಾ/ಲಖನೌ: ಜೈಲಿನಲ್ಲಿದ್ದ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ (63) ಉತ್ತರ ಪ್ರದೇಶದ ಬಾಂಡಾ ವೈದ್ಯಕೀಯ ಕಾಲೇಜಿನಲ್ಲಿ ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಸುನೀಲ್ ಕೌಶಲ್ ತಿಳಿಸಿದ್ದಾರೆ.

ಹೊಟ್ಟೆನೋವಿನಿಂದ ಬಳಲುತ್ತಿದ್ದ ಅನ್ಸಾರಿಯನ್ನು ಬಾಂಡಾ ಜಿಲ್ಲಾ ಕಾರಾಗೃಹದಿಂದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಾಊ ಸದರ್ ವಿಧಾನಸಭಾ ಕ್ಷೇತ್ರವನ್ನು ಮುಖ್ತಾರ್ ಐದು ಬಾರಿ ಪ್ರತಿನಿಧಿಸಿದ್ದರು. ಈತನ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಉತ್ತರ ಪ್ರದೇಶದ ವಿವಿಧ ನ್ಯಾಯಾಲಯಗಳು ಎಂಟು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿದ್ದರಿಂದ 2022ರ ಸೆಪ್ಟೆಂಬರ್ನಿಂದ ಬಾಂಡಾ ಜೈಲಿನಲ್ಲಿದ್ದರು.

ಉತ್ತರ ಪ್ರದೇಶ ಪೊಲೀಸರು ಕಳೆದ ವರ್ಷ ಪ್ರಕಟಿಸಿದ್ದ 66 ದರೋಡೆಕೋರರ ಪಟ್ಟಿಯಲ್ಲಿ ಅನ್ಸಾರಿಯ ಹೆಸರು ಇತ್ತು. ‘ಮುಖ್ತಾರ್ಗೆ ಜೈಲಿನಲ್ಲಿ ವಿಷ ನೀಡಲಾಗಿದೆ’ ಎಂದು ಗಾಜಿಪುರ ಸಂಸದ ಹಾಗೂ ಈತನ ಸಹೋದರ ಅಫ್ಜಲ್ ಅನ್ಸಾರಿ ಈ ಹಿಂದೆ ಆರೋಪಿಸಿದ್ದರು.

‘ಅನ್ಸಾರಿ ನಿಧನದ ನಂತರ ಉತ್ತರ ಪ್ರದೇಶದಾದ್ಯಂತ ಬೃಹತ್ ಸಭೆ ಆಯೋಜಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಬಾಂಡಾ, ಮಾಊ, ಗಾಜಿಯಾಪುರ ಮತ್ತು ವಾರಣಾಸಿ ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.