ಕೀವ್: ಉಕ್ರೇನ್‌ನ ಕೀವ್ ಹಾಗೂ ಹಾರ್ಕಿವ್ ನಗರದ ಮೇಲೆ ಮಂಗಳವಾರ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಐವರು ಸಾವಿಗೀಡಾಗಿದ್ದು, 130 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಬ್ದಕ್ಕಿಂತ 10 ಪಟ್ಟು ವೇಗದಲ್ಲಿ ಸಂಚರಿಸುವ ಕಿಂಝಲ್ ಕ್ಷಿಪಣಿ ಮೂಲಕ ರಷ್ಯಾ ದಾಳಿ ನಡೆಸಿದ್ದು, ಎಲ್ಲಾ 10 ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನಿನ ಕಮಾಂಡರ್ ಇನ್ ಚೀಫ್ ವ್ಯಾಲೆರಿ ಜಲುಜ್ನಿ ತಿಳಿಸಿದ್ದಾರೆ.
.21 ಡ್ರೋನ್, 3 ಕ್ಷಿಪಣಿಗಳಿಂದ ರಷ್ಯಾ ದಾಳಿ: ಉಕ್ರೇನ್.
ಕೀವ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ 4 ಮಂದಿ ಮೃತಪಟ್ಟಿದ್ದು, 70 ಮಂದಿ ಗಾಯಗೊಂಡಿದ್ದಾರೆ. ಹಾರ್ಕಿವ್ ಪ್ರದೇಶದಲ್ಲಿ ಒಬ್ಬರು ಸಾವಿಗೀಡಾಗಿದ್ದು, 60 ಮಂದಿ ಗಾಯಗೊಂಡಿದ್ದಾರೆ. ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

Kh-47M2 Kinzhal ಖಂಡಾಂತರ ಕ್ಷಿಪಣಿಯಾಗಿದ್ದು, ದುಬಾರಿ ವೆಚ್ಚ ಮತ್ತು ಸೀಮಿತ ದಾಸ್ತಾನಿನ ಕಾರಣದಿಂದಾಗಿ ರಷ್ಯಾ ಪಡೆಗಳು ವಿರಳವಾಗಿ ಬಳಸುತ್ತವೆ. ಮಂಗಳವಾರದ ದಾಳಿಯು ಯುದ್ಧ ಪ್ರಾರಂಭವಾದ ನಂತರ ಒಂದು ದಾಳಿಯಲ್ಲಿ ಬಳಸಲಾದ ಅತಿ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಉಕ್ರೇನ್ ವಾಯುಪಡೆಯ ವಕ್ತಾರ ಯೂರಿ ಇಹ್ನಾತ್ ಹೇಳಿದ್ದಾರೆ.
.ರಷ್ಯಾ ವಿರುದ್ಧದ ನಮ್ಮ ಸಂಕಲ್ಪ ದುರ್ಬಲಗೊಳ್ಳದು: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.