ವಾಷಿಂಗ್ಟನ್: ಸ್ವಯಂಚಾಲಿತ ರೋಬೊ ದೂರವಾಣಿ ಕರೆಗಳನ್ನು ಬಳಸಿಕೊಂಡು ಅಮೆರಿಕದಾದ್ಯಂತ ಹಲವು ಜನರನ್ನು ಬೆದರಿಸಿ ಸುಮಾರು ₹9.96 ಕೋಟಿ ಹಣ ವಸೂಲಿ ಮಾಡಿರುವ ‘ರೋಬೊಕಾಲ್ ಹಗರಣ’ದಲ್ಲಿ ಭಾಗಿಯಾದ ಇಬ್ಬರು ಭಾರತೀಯ ಪ್ರಜೆಗಳಿಗೆ 41 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಅರುಶೋಬಿಕೆ ಮಿತ್ರ (29) ಮತ್ತು ಗರ್ಬಿತಾ ಮಿತ್ರ (25) ಶಿಕ್ಷೆಗೆ ಗುರಿಯಾದವರು. ಅಮೆರಿಕದ ಜಿಲ್ಲಾ ನ್ಯಾಯಾಧೀಶರಾದ ಎಸ್ತರ್ ಸಲಾಸ್ ಅವರ ಎದುರು ಈ ಇಬ್ಬರು ತಪ್ಪೊಪ್ಪಿಕೊಂಡಿದ್ದರು ಎಂದು ವಕೀಲ ಫಿಲಿಪ್ ಆರ್. ಸೆಲ್ಲಿಂಗರ್ ಮಂಗಳವಾರ ಹೇಳಿದ್ದಾರೆ.

‘ಈ ಪ್ರಕರಣದ ಸಂಚುಕೋರರು ಕೆಲವು ದುರ್ಬಲ ನಾಗರಿಕರನ್ನು ಗುರಿಯಾಗಿಸಿಕೊಂಡು ಅವರ ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸಲು ಬೆದರಿಕೆ ತಂತ್ರಗಳನ್ನು ಬಳಸಿದ್ದರು’ ಎಂದು ಸೆಲ್ಲಿಂಗರ್ ಹೇಳಿದರು.

‘ಭಾರತ ಮೂಲದ, ಕ್ರಿಮಿನಲ್ ಹಿನ್ನೆಲೆಯ ಕಾಲ್ ಸೆಂಟರ್ಗಳು ಅಮೆರಿಕ ನಿವಾಸಿಗಳಿಗೆ ಅದರಲ್ಲೂ ವಯಸ್ಸಾದವರಿಗೆ ವಂಚಿಸುವ ಉದ್ದೇಶದಿಂದ ದೇಶದಾದ್ಯಂತ ಸಂತ್ರಸ್ತರನ್ನು ಸಂಪರ್ಕಿಸಲು ಸ್ವಯಂಚಾಲಿತ ರೋಬೊಕಾಲ್ಗಳನ್ನು ಬಳಸಿಕೊಂಡಿವೆ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದಾಖಲೆಗಳು ಹೇಳಿವೆ.

ಸಂಚುಕೋರರು, ಈ ಪ್ರಕರಣದ ಬಾಧಿತರಿಂದ ಹಣ ಲಪಟಾಯಿಸುವಾಗ ಸರ್ಕಾರಿ ಅಧಿಕಾರಿಗಳು, ಎಫ್ಬಿಐ ಅಥವಾ ಡಿಇಎಯಂತಹ ತನಿಖಾ ಏಜೆನ್ಸಿಗಳ ಅಧಿಕಾರಿಗಳ ಸೋಗು ಹಾಕುತ್ತಿದ್ದರು. ಹಣ ಕಳುಹಿಸದಿದ್ದರೆ ಕಠಿಣ ಕಾನೂನು ಕ್ರಮ ಅಥವಾ ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಬೆದರಿಸುತ್ತಿದ್ದರು ಎಂದು ಫೆಡರಲ್ ಪ್ರಾಸಿಕ್ಯೂಟರ್ಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.