ಮುಂಬೈ: ಶಿವಸೇನಾ ಬಂಡಾಯ ಶಾಸಕರಿಗೆ ಒದಗಿಸಿರುವ ಭಾರೀ ಭದ್ರತೆಯ ಕುರಿತು ಶಿವಸೇನಾ ಮುಖಂಡ ಆದಿತ್ಯ ಠಾಕ್ರೆ ವ್ಯಂಗ್ಯವಾಡಿದ್ದಾರೆ.

ಮುಂಬೈನ ಐಷಾರಾಮಿ ಹೊಟೇಲ್ನಿಂದ ವಿಧಾನ ಭವನದ ಆವರಣಕ್ಕೆ ಭಾರೀ ಭದ್ರತೆಯಲ್ಲಿ ಶಿವಸೇನಾ ಬಂಡಾಯ ಶಾಸಕರು ಭಾನುವಾರ ಬಂದಿಳಿದಿದ್ದಾರೆ.

ಬಂಡಾಯ ಶಾಸಕರಿಗೆ ನೀಡಿರುವ ಭದ್ರತಾ ವ್ಯವಸ್ಥೆ ವಿಚಾರವಾಗಿ ಏಕನಾಥಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಗುರಿಯಾಗಿಸಿ ಆದಿತ್ಯ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.

‘ಮುಂಬೈನಲ್ಲಿ ನಾವು ಈ ಹಿಂದೆ ಇಂತಹ ಭದ್ರತೆಯನ್ನೇ ನೋಡಿರಲಿಲ್ಲ. ಭಯೋತ್ಪಾದಕ ಅಜ್ಮಲ್ ಕಸಬ್ಗೂ ಈ ರೀತಿಯ ಭದ್ರತೆ ನೀಡಿರಲಿಲ್ಲ. ನಿಮಗೇಕೆ ಇಷ್ಟೊಂದು ಭಯ?’ ಎಂದು ಶಿಂಧೆಗೆ ಪ್ರಶ್ನಿಸಿದ್ದಾರೆ.

ಶಿವಸೇನಾ ಬಂಡಾಯ ಬಣ ಹಾಗೂ ಬಿಜೆಪಿ ಮೈತ್ರಿ ಸರ್ಕಾರವು ಜುಲೈ 4 ರಂದು ವಿಧಾನಸಭೆ ಅಧಿವೇಶನದಲ್ಲಿ ವಿಶ್ವಾಸ ಮತಯಾಚನೆ ಮಾಡಲಿದೆ.

ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ಬಿಜೆಪಿಯ ರಾಹುಲ್ ನರ್ವೇಕರ್ ಆಯ್ಕೆಯಾಗಿದ್ದು, ಸೋಮವಾರದ ವಿಶ್ವಾಸ ಮತಕ್ಕೂ ಮೊದಲು ಏಕನಾಥ ಶಿಂಧೆ–ಬಿಜೆಪಿ ದೋಸ್ತಿಗೆ ಮೊದಲ ಗೆಲುವು ಸಿಕ್ಕಂತಾಗಿದೆ.

ಇದನ್ನೂ ಓದಿ–ರಾಹುಲ್ ನರ್ವೇಕರ್ ಮಹಾರಾಷ್ಟ್ರ ಸ್ಪೀಕರ್: ಶಿಂಧೆ–ಬಿಜೆಪಿ ದೋಸ್ತಿಗೆ ಮೊದಲ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.