ನವದೆಹಲಿ: ಹಕ್ಕಿಜ್ವರ ಪ್ರಸರಣವಾಗುವ ಭೀತಿಯಿಂದ, ಬೇರೆ ರಾಜ್ಯಗಳಿಂದ ಹಕ್ಕಿಗಳನ್ನು ತರಿಸಿಕೊಳ್ಳುವುದನ್ನು ನಿಷೇಧಿಸಿ ದೆಹಲಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಗಾಜಿಪುರದಲ್ಲಿರುವ ಪೌಲ್ಟ್ರಿ ಮಾರುಕಟ್ಟೆಯನ್ನು ಸಹ 10 ದಿನಗಳ ಕಾಲ ಬಂದ್ ಮಾಡಲು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದರು.

ನಗರದಲ್ಲಿ ಕಳೆದ ಮೂರು ದಿನಗಳಲ್ಲಿ 24 ಕಾಗೆಗಳು, 10 ಬಾತುಕೋಳಿಗಳು ಸತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಈ ಎರಡು ತುರ್ತು ಕ್ರಮಗಳನ್ನು ಕೈಗೊಂಡಿದೆ.

‘ನಗರದಲ್ಲಿ ಹಕ್ಕಿಜ್ವರ ಪ್ರಕರಣಗಳು ವರದಿಯಾಗಿಲ್ಲ. ಈ ಕುರಿತು ಜನರಲ್ಲಿ ಆತಂಕ ಬೇಡ. ಹಕ್ಕಿಜ್ವರ ಪ್ರಸರಣ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದೂ ಅವರು ಹೇಳಿದರು.

‘ಜಲಂಧರ್ನಲ್ಲಿರುವ ಪ್ರಯೋಗಾಲಯಕ್ಕೆ 104 ಮಾದರಿಗಳನ್ನು ಕಳಿಸಲಾಗಿದ್ದು, ಸೋಮವಾರ (ಜ.11) ವರದಿ ಕೈಸೇರುವುದು’ ಎಂದರು.

ಕ್ಚಿಪ್ರವಾಗಿ ಕ್ರಮಗೊಳ್ಳಲು ಹಾಗೂ ಕಣ್ಗಾವಲಿಗಾಗಿ ಎಲ್ಲ ಜಿಲ್ಲಾ ಆಡಳಿತಗಳಿಗೆ ಸೂಚನೆ ನೀಡಲಾಗಿದೆ. ಹಕ್ಕಿಗಳ ಮಾರುಕಟ್ಟೆ, ಕೋಳಿ ಸಾಕಣೆ ಕೇಂದ್ರಗಳನ್ನು ಪರಿಶೀಲಿಸುವಂತೆ ಪಶುವೈದ್ಯರಿಗೆ ನಿರ್ದೇಶನ ನೀಡಲಾಗಿದೆ. 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ (011–23890318) ಸ್ಥಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.