ನವದೆಹಲಿ: ದೇಶದ ಪಶ್ಚಿಮ ಕರಾವಳಿ ಭಾಗದಲ್ಲಿ ತೌತೆ ಚಂಡಮಾರುತವು ತೀವ್ರ ಹಾನಿ ಉಂಟು ಮಾಡಿದ ಬೆನ್ನಲ್ಲೇ 'ಯಾಸ್' ಚಂಡಮಾರುತವು ಅಪ್ಪಳಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಲಿರುವ ಈ ಚಂಡಮಾರುತಕ್ಕೆ 'ಯಾಸ್' ಎಂದು ಹೆಸರಿಡಲಾಗಿದೆ.

'ಯಾಸ್' ಚಂಡಮಾರುತದ ಬಗ್ಗೆ ನಾವು ತಿಳಿಯಬೇಕಾದ ಅಂಶಗಳು ಇಲ್ಲಿವೆ...

*ಒಮನ್ ದೇಶದಲ್ಲಿ ಬೆಳೆಯುವ ಮಲ್ಲಿಗೆ ಗಿಡದ(ಯಾಸ್) ಹೆಸರನ್ನು ಈ ಚಂಡಮಾರುತಕ್ಕೆ ಇಡಲಾಗಿದೆ.

*ಬಂಗಾಳ ಕೊಲ್ಲಿಯಲ್ಲಿ ಆಗುವ ಬದಲಾವಣೆಗಳು ಈ ಚಂಡಮಾರುತವನ್ನು ಸೃಷ್ಟಿಸಲಿವೆ.

*ಮೇ 26ರಂದು ‘ಯಾಸ್’ ಚಂಡಮಾರುತವು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ಹಾದುಹೋಗಲಿದೆ.

*ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಕೈಗೊಂಡಿರುವ ಪೂರ್ವ ಸಿದ್ಧತೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಮೇ 23) ಸಭೆ ನಡೆಸಿದ್ದಾರೆ.

*ಚಂಡಮಾರುತವು ಸೃಷ್ಟಿಸಬಹುದಾದ ಅನಾಹುತಗಳನ್ನು ತಡೆಯಲು ರಾಷ್ಟ್ರೀಯ ವಿಪತ್ತು ಪಡೆ ಈಗಾಗಲೇ 65 ತಂಡಗಳನ್ನು ರಚಿಸಿದೆ.

*ಮೇ 26ರ ಬೆಳಿಗ್ಗೆ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾದ ನೆರೆಯ ಪ್ರದೇಶಗಳು ಮತ್ತು ಬಾಂಗ್ಲಾದೇಶದ ಕರಾವಳಿ ಪ್ರದೇಶಗಳಲ್ಲಿ ಗಾಳಿಯ ವೇಗವು 155ರಿಂದ 165 ಕಿ.ಮೀ ಇರಲಿದೆ. ಇದು ವಾಯುಭಾರ ಕುಸಿತವನ್ನು ಉಂಟುಮಾಡಲಿದ್ದು, ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.

*ಚಂಡಮಾರುತಕ್ಕೆ ಒಳಗಾಗಲಿರುವ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಲು ಅನುಕೂಲವಾಗುವಂತೆ, ನೌಕಾಪಡೆಯ ವಿಶಾಖಪಟ್ಟಣದಲ್ಲಿರುವ ವಾಯುನೆಲೆ ಐಎನ್‌ಎಸ್ ದೆಗಾ ಹಾಗೂ ಚೆನ್ನೈನ ಐಎನ್‌ಎಸ್ ರಜಲಿಯಲ್ಲಿ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

*ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯು ಸಹ ಕಾರ್ಯರೂಪಕ್ಕೆ ಬಂದಿದೆ. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಆರೋಗ್ಯ ಸೌಕರ್ಯಗಳನ್ನು ಒದಗಿಸಲು ಒತ್ತು ನೀಡಲಾಗಿದೆ.

*ಪಶ್ಚಿಮ ಬಂಗಾಳ ಸರ್ಕಾರವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಿದೆ. ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ.

ಇವುಗಳನ್ನೂ ಓದಿ...

ಯಾಸ್ ಚಂಡಮಾರುತ: ಪೂರ್ವ ಸಿದ್ಧತೆ ಕುರಿತು ಇಂದು ಪ್ರಧಾನಿ ಮೋದಿ ಸಭೆ

ಮೇ 26ಕ್ಕೆ ಯಾಸ್ ಚಂಡಮಾರುತ: ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಕಟ್ಟೆಚ್ಚರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.