ನವದೆಹಲಿ: ಹೈದರಾಬಾದ್‌ನ ಔಷಧ ಉತ್ಪಾದಕ ಸಂಸ್ಥೆ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಇಂದು ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಫಲಾನುಭವಿಯೊಬ್ಬರಿಗೆ ನೀಡುವ ಮೂಲಕ ಭಾರತದಲ್ಲಿ ಈ ಲಸಿಕೆಯ ಬಳಕೆಗೆ ಚಾಲನೆ ನೀಡಿದೆ.

ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಸರಕು ಮೇ 1 ರಂದು ಭಾರತಕ್ಕೆ ಬಂದಿಳಿದಿತ್ತು. ಮೇ 13 ರಂದು ಕೇಂದ್ರದ ಔಷಧ ಪ್ರಯೋಗಾಲಯದಿಂದ ನಿಯಂತ್ರಕ ಅನುಮತಿಯನ್ನು ಪಡೆಯಿತು ಎಂದು ರೆಡ್ಡೀಸ್ ಲ್ಯಾಬ್ ತಿಳಿಸಿದೆ.

‘ಮುಂಬರುವ ಕೆಲ ತಿಂಗಳುಗಳಲ್ಲಿ ಹೆಚ್ಚಿನ ಸರಕನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಬಳಿಕ, ಸ್ಪುಟ್ನಿಕ್ ವಿ ಲಸಿಕೆಯ ಭಾರತೀಯ ಉತ್ಪಾದನಾ ಪಾಲುದಾರರಿಂದ ಸರಬರಾಜು ಪ್ರಾರಂಭವಾಗಲಿದೆ’ ಎಂದು ಅದು ಹೇಳಿದೆ.

ಪ್ರತಿ ಡೋಸ್‌ಗೆ ಶೇ. 5ರಷ್ಟು ಜಿಎಸ್‌ಟಿ ಸೇರಿ ಆಮದಾಗಿರುವ ಲಸಿಕೆಯ ಗರಿಷ್ಠ ಚಿಲ್ಲರೆ ಬೆಲೆ ₹ 995ನಿಗದಿಪಡಿಸಲಾಗಿದೆ. ಸ್ಥಳೀಯವಾಗಿ ಪೂರೈಕೆ ಆರಂಭವಾದ ಬಳಿಕ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ.. ರಷ್ಯಾದ ಸ್ಪುಟ್ನಿಕ್-ವಿ ಮುಂದಿನ ವಾರದಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯ: ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.