ಗುವಾಹಟಿ/ಸಿಲ್ಚಾರ್: ಅಸ್ಸಾಂ ಪೊಲೀಸರು ಶನಿವಾರ ₹2,000 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯ ಮೂರು ಜಿಲ್ಲೆಗಳಿಂದ ಪೊಲೀಸರು ಈ ಬೃಹತ್ ಪ್ರಮಾಣದ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.

ಕ್ಯಾಚಾರ್ ಜಿಲ್ಲೆಯಲ್ಲಿ 683 ಕೆ.ಜಿ ಗಾಂಜಾ, 6,04,443 ಯಾಬಾ ಮಾತ್ರೆಗಳು, 6.214 ಕೆಜಿ ಹೆರಾಯಿನ್ ಮತ್ತು 271 ಬಾಟಲಿ ಕೆ.ಜಿ ಕೆಮ್ಮು ಸಿರಪ್ ನಾಶಪಡಿಸಲಾಗಿದೆ. ನಾಶಪಡಿಸಿದ ಮಾದಕ ವಸ್ತುಗಳ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ₹1,920.02 ಕೋಟಿ ಎಂದು ಪೊಲೀಸರು ತಿಳಿಸಿದ್ದಾರೆ.

ಅದೇ ರೀತಿ ಕರೀಂಗಂಜ್ ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾಗಿದ್ದ ಗಾಂಜಾ (5.185 ಕೆ.ಜಿ), ಯಾಬಾ ಮಾತ್ರೆಗಳು (5,95,366 ), ಹೆರಾಯಿನ್ (3.65 ಕೆ.ಜಿ), ಮತ್ತು ಫೆನ್ಸೆಡಿಲ್ ಕೆಮ್ಮು ಸಿರಪ್ (76,103 ಬಾಟಲಿಗಳು) ನಾಶಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ವೇಳೆ ಹೈಲಕಂಡಿ ಪೊಲೀಸರು ₹12 ಲಕ್ಷ ಮೌಲ್ಯದ ಡ್ರಗ್ಸ್ ಸುಟ್ಟು ಹಾಕಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ 116 ಗ್ರಾಂ ಹೆರಾಯಿನ್, 32 ಕೆ.ಜಿ ಗಾಂಜಾ ಮತ್ತು 82 ಕೆಮ್ಮಿನ ಸಿರಪ್ಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ ಸೂರಜಿತ್ ಚೌಧರಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಸ್ಸಾಂ ದಕ್ಷಿಣ ವಿಭಾಗದ ಡಿಐಜಿ ಕಂಕಂಜ್ಯೋತಿ ಸೈಕಿಯಾ, ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಿದರು. ಕಳೆದ ಕೆಲವು ತಿಂಗಳುಗಳಲ್ಲಿ ಪೊಲೀಸರು ಜಿಲ್ಲೆಯಾದ್ಯಂತ ನಡೆಸಿದ ಹಲವು ದಾಳಿಗಳಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇವುಗಳನ್ನೂ ಓದಿ

ಸುಶಾಂತ್ಗೆ ಡ್ರಗ್ಸ್ ಪೂರೈಸುತ್ತಿದ್ದುದು ನಟಿ ರಿಯಾ ಚಕ್ರವರ್ತಿ: ಚಾರ್ಜ್ಶೀಟ್

ಕಳೆದ 3 ವರ್ಷಗಳಲ್ಲಿ ಪರೀಕ್ಷಿಸಿದ 84,874 ಔಷಧ ಮಾದರಿಗಳ ಪೈಕಿ 7,700 ಕಳಪೆ

ಗುಪ್ತಾಂಗದಲ್ಲಿ ಡ್ರಗ್ಸ್ ಇಟ್ಟುಕೊಂಡುಕೈದಿಗಳಿಗೆಪೂರೈಸುತ್ತಿದ್ದ ಮಹಿಳೆಯರ ಬಂಧನ

ಚಿತ್ರದುರ್ಗದಲ್ಲಿ ಮಾದಕ ಜಾಲ ಗುಪ್ತಗಾಮಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.