ಮುಂಬೈ: ಕೇಂದ್ರೀಯ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯ(ಇ.ಡಿ)ದ ನಿಯಂತ್ರಣವನ್ನು ತಮ್ಮ ಪಕ್ಷಕ್ಕೆ ನೀಡಿದರೆ, ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಅವರು ಸಹ ಶಿವಸೇನಾ ಪಕ್ಷಕ್ಕೆ ಮತ ನೀಡುತ್ತಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ಹೇಳಿದ್ದಾರೆ.

ಈ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ‘2 ದಿನಗಳ ಕಾಲ ಇ.ಡಿಯ ನಿಯಂತ್ರಣವನ್ನು ತಮಗೆ ನೀಡಿದ್ದರೆ, ದೇವೇಂದ್ರ ಫಡಣವೀಸ್ ಅವರು ಸಹ ನಮಗೆ ಮತ ಹಾಕುತ್ತಿದ್ದರು’ ಎಂದು ಹೇಳಿದರು.ಶುಕ್ರವಾರ ನಡೆದರಾಜ್ಯಸಭೆ ಚುನಾವಣೆಯಲ್ಲಿ ಶಿವಸೇನಾ ಅಭ್ಯರ್ಥಿ ಸಂಜಯ್ ಪವಾರ್ ಅವರ ಸೋಲಿನ ಕುರಿತು ರಾವುತ್ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯ ಗೆಲುವಿನ ಬಗ್ಗೆ ಶನಿವಾರ ಮಾತನಾಡಿದ್ದ ರಾವುತ್ ಅವರು, ಇದು ಶಾಸಕರ ಖರೀದಿಗೆ ಸಿಕ್ಕ ಜನಾದೇಶ ಎಂದು ಟೀಕಿಸಿದ್ದರು.6ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ವಿಚಾರವು ಆಡಳಿತಾರೂಢ ಶಿವಸೇನಾ ಮತ್ತು ವಿರೋಧ ಪಕ್ಷ ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.