ನವದೆಹಲಿ: 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸಿಂಘು ಗಡಿಯಲ್ಲಿ ಮಾಜಿ ಸೈನಿಕರು ಪಥಸಂಚಲನ ನಡೆಸಿದರು.

‘ಹಿರಿಯ ರೈತ ಮುಖಂಡ ಸತ್ನಾಂ ಸಿಂಗ್ ಅವರು ಸಿಂಘು ಗಡಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೇರವೇರಿಸಿದರು. ಇದೇ ವೇಳೆ ಸೇನಾ ಉಡುಪಿನಲ್ಲಿ ಮಾಜಿ ಸೈನಿಕರು ಪಥಸಂಚಲನ ನಡೆಸಿದರು. ಜಲಂಧರ್ನ ಡಿಎವಿ ಕಾಲೇಜಿನ ವಿದ್ಯಾರ್ಥಿಗಳು ಸುಮಾರು ಒಂದೂವರೆ ಗಂಟೆ ‘ಭಾಂಗ್ರಾ’ ನೃತ್ಯ ಪ್ರದರ್ಶಿಸಿದರು’ ಎಂದು ರೈತ ಮುಖಂಡ ರಮಿಂದರ್ ಸಿಂಗ್ ಪಟಿಯಾಲಾ ಅವರು ತಿಳಿಸಿದ್ದಾರೆ.

‘ಕೆಎಫ್ಸಿ ರೆಸ್ಟೋರೆಂಟ್ನಿಂದ ಆರಂಭವಾದ ಮಾಜಿ ಸೈನಿಕರ ಪಥಸಂಚಲನ ಸಿಂಘು ಗಡಿಯಲ್ಲಿರುವ ಪ್ರಧಾನ ವೇದಿಕೆಯವರೆಗೆ ಮುಂದುವರಿಯಿತು. ಗಡಿಯಲ್ಲಿ ಪ್ರತಿಭಟನನಿರತ ರೈತರು ಈ ದಿನವನ್ನು ‘ಕಿಸಾನ್ ಮಜ್ದೂರ್ ಆಜಾದಿ ಸಂಗ್ರಾಮ ದಿನ’ ಎಂದು ಆಚರಿಸಿದರು. ಈ ಭಾಗದಲ್ಲಿ ಜನರು ರೈತರಿಗೆ ಬೆಂಬಲ ಸೂಚಿಸಲು ರಾಷ್ಟ್ರಧ್ವಜಗಳನ್ನು ಪ್ರದರ್ಶಿಸಿದರು. ಅಂತೆಯೇ ಟಿಕ್ರಿ ಗಡಿಯಲ್ಲೂ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು’ ಎಂದೂ ಅವರು ಹೇಳಿದ್ದಾರೆ.

ಕಳೆದ ಏಳು ವರ್ಷಗಳಿಂದ ಪ್ರಧಾನಿಯಿಂದ ಒಂದೇ ರೀತಿಯ ಭಾಷಣ: ಖರ್ಗೆ

‘ಗಾಜಿಯಾಪುರ ಗಡಿಯಲ್ಲಿ 500 ಮೋಟಾರ್ ಸೈಕಲ್ಗಳು ‘ತಿರಂಗ ಯಾತ್ರಾ’ವನ್ನು ಕೈಗೊಂಡವು’ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ಧರ್ಮೇಂದ್ರ ಮಲ್ಲಿಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.