ದೆಹಲಿ: ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿದೆ. ಐಟಿಒ ಬಳಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಲಾಠಿಚಾರ್ಜ್ ವೇಳೆ ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ನಿಗದಿತ ಮಾರ್ಗ ಬದಲಿಸಿ ರೈತರ ಟ್ರಾಕ್ಟರ್‌ಗಳು ಬೇರೆ ಕಡೆ ತೆರಳಲು ಮುಂದಾದಾಗ ಪೊಲೀಸರು ತಡೆದಿದ್ದು, ಈ ಸಂದರ್ಭ ಘರ್ಷಣೆ ಸಂಭವಿಸಿದೆ. ಕೆಲ ರೈತರು ಪೂರ್ವನಿರ್ಧರಿತ ಮಾರ್ಗದಲ್ಲಿ ತೆರಳಲು ನಿರಾಕರಿಸಿ ದೆಹಲಿಯ ಐಟಿಒ ಕಡೆಗೆ ತಲುಪಿದ್ದರು. ಪೊಲೀಸ್ ಕೇಂದ್ರ ಕಚೇರಿ ಬ್ಯಾರಿಕೇಡ್ ಹಾಕಿದ ಪೊಲೀಸರು, ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸುವ ಮೂಲಕ ತಿಲಕ್ ಬ್ರಿಡ್ಜ್ ಕಡೆಗೆ ತೆರಳದಂತೆ ತಡೆದರು.

ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಐಟಿಒ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.

ಲುಟೆನ್ಸ್, ಚಿಂತಮಣಿ ಚೌಕ್ ಸೇರಿ ಹಲವೆಡೆ ಹಿಂಸಾಚಾರದ ಬಗ್ಗೆ ವರದಿಯಾಗಿದೆ.

ಈ ಮಧ್ಯೆ, ಕೆಂಪುಕೋಟೆ ಮೇಲೆ ರೈತರು ಅನ್ಯ ಧ್ವಜ ಹಾರಿಸಿದ್ದಾರೆ.

ಅಪ್ಸರಾ ಬಾರ್ಡರ್ ಕಡೆಗೆ ರೈತರ ರ‍್ಯಾಲಿಗೆ ತೆರಳಲು ಮಾರ್ಗ ನಿಗದಿ ಮಾಡಲಾಗಿತ್ತು. ಆದರೆ, ರೈತರು ಚಿಂತಮಣಿ ಚೌಕ್ ಬಳಿ ಬ್ಯಾರಿಕೇಡ್ ಮುರಿದು ನುಗ್ಗಿದ್ದರಿಂದ ಗುಂಪು ಚದುರಿಸಲು ಪೊಲೀಸರು ಲಾಠಚಾರ್ಜ್ ನಡೆಸಿದ್ದಾರೆ. ಬಳಿಕ ಅಶ್ರುವಾಯು ಪ್ರಯೋಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.