ಬಿಜಾಪುರ್: ಎರಡು ವಾಹನಗಳು ಮತ್ತು ಖಾಸಗಿ ಟೆಲಿಕಾಂ ಕಂಪನಿಯ ಕೇಬಲ್ ಹಾಕಲು ಬಳಸುತ್ತಿದ್ದ ಯಂತ್ರಕ್ಕೆ ನಕ್ಸಲರು ಬೆಂಕಿ ಹಚ್ಚಿದ ಘಟನೆ ಛತ್ತೀಸ್‌ಗಡದ ಬಿಜಾಪುರ್ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್, ಸಾವು–ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜಾಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಡೆರಾ ಮತ್ತು ಕಕೆಕೊರ್ಮಾ ಗ್ರಾಮಗಳ ನಡುವಣ ಪ್ರದೇಶದಲ್ಲಿ ಭಾನುವಾರ ಸಂಜೆ ನಕ್ಸಲರು ದುಷ್ಕೃತ್ಯ ಎಸಗಿದ್ದಾರೆ ಎಂದು ಎಎಸ್‌ಪಿ ಪಂಕಜ್ ಶುಕ್ಲಾ ತಿಳಿಸಿದ್ದಾರೆ.

ರಾಯಚೂರಲ್ಲಿಒಂದೇ ಕಾಲೇಜಿನ 4 ವಿದ್ಯಾರ್ಥಿನಿಯರು ನಾಪತ್ತೆ: ಪೊಲೀಸ್ ತನಿಖೆ ಆರಂಭ

ಕೇಬಲ್ ಅಳವಡಿಕೆ ಕಾರ್ಯ ನಡೆಯುತ್ತಿದ್ದಾಗ ಸ್ಥಳಕ್ಕೆ ಬಂದ ಶಸ್ತ್ರಧಾರಿ ನಕ್ಸಲರು ಕೆಲಸ ಸ್ಥಗಿತಗೊಳಿಸುವಂತೆ ಕಾರ್ಮಿಕರಿಗೆ ಬೆದರಿಕೆಯೊಡ್ಡಿದ್ದಾರೆ. ಬಳಿಕ ಯಂತ್ರಕ್ಕೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅವರು ಹೇಳಿದ್ದಾರೆ.

ವಾಹನಗಳಿಗೆ ಹಾಗೂ ಯಂತ್ರಕ್ಕೆ ಬೆಂಕಿಹಚ್ಚಿರುವ ಕೃತ್ಯಕ್ಕೆ ಸಂಬಂದಿಸಿ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಭಿವೃದ್ಧಿಕಾರ್ಯಗಳಿಗೆ ನಕ್ಸಲರು ಅಡ್ಡಿಪಡಿಸಿದ ಘಟನೆಗಳು ಈ ಹಿಂದೆಯೂ ರಾಜ್ಯದ ಹಲವೆಡೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.