ನವದೆಹಲಿ: ಟ್ವಿಟ್ಟರ್‌ಗೆ ಪರ್ಯಾಯವಾದ ಭಾರತದ ಮೈಕ್ರೋ ಬ್ಲಾಗಿಂಗ್ ವೇದಿಕೆ ‘ಕೂ’ನಲ್ಲಿ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಪ್ರಕಾಶ್ ಜಾವಡೇಕರ್ ಅವರು ಶುಕ್ರವಾರ ತಮ್ಮ ಖಾತೆ ತೆರೆದಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದು, ‘ಈಗ ನಾನು ‘ಕೂ’ ಕೂಡ ಬಳಸುತ್ತಿದ್ದೇನೆ. ಅದರಲ್ಲಿ @prakashjavadekar ಫಾಲೊ ಮಾಡಿ’ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವರು, ರಾಜಕಾರಣಿಗಳು ಸೇರಿದಂತೆ ಹಲವರು ಜನ ಈಗ ‘ಕೂ’ ಆ್ಯಪ್ ಬಳಸುತ್ತಿದ್ದಾರೆ. ಕಳೆದ 10 ತಿಂಗಳ ಹಿಂದೆ ಈ ಆ್ಯಪ್ ಆರಂಭವಾಗಿದೆ. ಆದರೆ ರೈತರ ಪ್ರತಿಭಟನೆ ವಿಚಾರವಾಗಿ ಟ್ವಿಟ್ಟರ್ ಜೊತೆಗಿನ ಅಸಮಾಧಾನದಿಂದಾಗಿಕಳೆದ ಕೆಲ ವಾರಗಳಿಂದ ಕೇಂದ್ರ ಸಚಿವರು ಹಾಗೂ ಸರ್ಕಾರಿ ಇಲಾಖೆ ವಿಭಾಗಗಳು ‘ಕೂ’ ಆ್ಯಪ್ ಬಳಸುತ್ತಿದ್ದು, ಭಾರಿ ಪ್ರಚಾರ ಪಡೆದುಕೊಂಡಿದೆ.

ಈಚೆಗೆ ರೈಲ್ವೆ ಸಚಿವ ಪೀಯೂಷ್ ಗೋಯಲ್ ಕೂಡ ‘ಕೂ’ಗೆ ಸೇರಿದ್ದಾರೆ.

‘ಕೂ’ ಕೂಡ ಟ್ವಿಟರ್‌ನಂತೆಯೇ ಇದೆ. ಟ್ವಿಟರ್‌ನ ಲೋಗೋದಲ್ಲಿ ನೀಲಿ ಹಕ್ಕಿ ಇರುವಂತೆ ಇಲ್ಲಿ ಹಳದಿ ಬಣ್ಣದ ಹಕ್ಕಿ ಇದೆ. ಸದ್ಯ ‘ಕೂ‘ವನ್ನು 30 ಲಕ್ಷ ಜನರು ಬಳಸುತ್ತಿದ್ದಾರೆ ಎಂದು ಅದರ ಸಹಸ್ಥಾಪಕ ಮಯಾಂಕ್ ಬಿಡವಟಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.