ಮುಂಬೈ: ಬಕ್ರೀದ್ ಹಬ್ಬದ ಸಮಯದಲ್ಲಿ ಜಾನುವಾರುಗಳನ್ನು ಬಲಿ ನೀಡಬಾರದು. ಗೋಹತ್ಯೆ ತಡೆಗೆ ಅಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದು ಮಹಾರಾಷ್ಟ್ರ ವಿಧಾನಸಭೆ ಸಭಾಪತಿ ರಾಹುಲ್ ನಾರ್ವೇಕರ್ ಸೂಚಿಸಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆಯ ಉಲ್ಲಂಘನೆ ಆಗದಂತೆ ಜಾಗ್ರತೆ ವಹಿಸುವ ಕುರಿತು ಡಿಜಿಪಿ ಅವರಿಗೆ ರಾಹುಲ್ ನಾರ್ವೇಕರ್ ಪತ್ರ ಬರೆದಿರುವುದಾಗಿ ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.

ಓದಿ...ಸಂಪುಟ ವಿಸ್ತರಣೆ: ಮಹಾರಾಷ್ಟ್ರ ಸಿಎಂ ಶಿಂಧೆ, ಫಡಣವೀಸ್ ಜೊತೆ ಜೆ.ಪಿ. ನಡ್ಡಾ ಸಭೆ

ಹೊರ ರಾಜ್ಯಗಳಿಂದ ಅಕ್ರಮವಾಗಿ ಗೋವುಗಳು, ಗೋಮಾಂಸ ಸಾಗಣೆ ಮಾಡುವವರ ಮೇಲೆ ಹದ್ದಿನ ಕಣ್ಣಿಡಬೇಕು. ಗೋಹತ್ಯೆ ತಡೆಗಟ್ಟುವಲ್ಲಿ ಸಕ್ರಿಯರಾಗಿರಬೇಕು ಎಂದು ರಾಹುಲ್ ನಾರ್ವೇಕರ್ ಸೂಚಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ವಿಧಾನಸಭೆಯಲ್ಲಿ ಜುಲೈ 4ರಂದು (ಸೋಮವಾರ) ವಿಶ್ವಾಸ ಮತ ಗೆದ್ದಿದ್ದಾರೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದ ಶಿಂಧೆ ಅವರು ಬಿಜೆಪಿ ಬೆಂಬಲದೊಂದಿಗೆ ಜೂನ್ 30ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಓದಿ...ಬಕ್ರೀದ್ ದಿನ ಜಾನುವಾರು ಹತ್ಯೆಗೆ ಕಡಿವಾಣ: ಸಚಿವ ಪ್ರಭು ಚವ್ಹಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.