ಉದಯಪುರ: ‘ಬಿಜೆಪಿ ವಿರುದ್ಧ ಕಾಂಗ್ರೆಸ್‌ನಂತೆ ಯಾವ ಪ್ರಾದೇಶಿಕ ಪಕ್ಷಗಳಿಗೂ ಹೋರಾಡಲು ಸಾಧ್ಯವಿಲ್ಲ. ಆದರೆ, ಅತಿ ಹಳೆಯ ಪಕ್ಷವಿಂದು ಜನರ ಸಂಪರ್ಕ ಕಡಿದುಕೊಂಡಿದೆ. ಬಿಜೆಪಿ ವಿರುದ್ಧ ದನಿಯೆತ್ತಲು ನಾವು ಜನರ ಸಂಪರ್ಕವನ್ನು ಬಲಪಡಿಸಬೇಕಿದೆ’ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಮಾತನಾಡಿದ ಅವರು ಉಲ್ಲೇಖಿಸಿದ ಐದು ಅಂಶಗಳು ಇಲ್ಲಿವೆ;

* ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್‌ನಂತೆ ಬಿಜೆಪಿ ವಿರುದ್ಧ ಹೋರಾಡುವುದು ಸಾಧ್ಯವಿಲ್ಲ.

* ಆರ್‌ಎಸ್‌ಎಸ್ ವಿವಿಧ ಸಂಸ್ಥೆಗಳಲ್ಲಿ ಮೂಗು ತೂರಿಸುವುದು ನಮಗೆ ಒಲ್ಲದ ವಿಚಾರ. ಪಕ್ಷದ ಸಂರಚನೆಯನ್ನು ತಳಮಟ್ಟದಿಂದ ಆಕ್ರಮಣಕಾರಿಯಾಗಿ ಬದಲಾಯಿಸಿದಾಗ ಮಾತ್ರ ನಾವು ಆರ್‌ಎಸ್‌ಎಸ್ ಅನ್ನು ಎದುರಿಸಬಹುದು.

ಸಂವಾದಕ್ಕೆ ಅವಕಾಶವಿಲ್ಲ, ಅದರ ಪರಿಣಾಮ ಅರ್ಥವಾಗುತ್ತಿಲ್ಲ: ರಾಹುಲ್ ಗಾಂಧಿ ಅಸಮಾಧಾನ

* ನಾನು ಯಾವತ್ತೂ ಭ್ರಷ್ಟನಾಗಿಲ್ಲ. ಯಾರಿಂದಲೂ ಹಣವನ್ನೂ ತಡೆಗೆದುಕೊಂಡಿಲ್ಲ ಮತ್ತು ಹೋರಾಡಲು ನನಗೆ ಹೆದರಿಕೆ ಇಲ್ಲ. ನಾವು ದ್ವೇಷ ಮತ್ತು ಹಿಂಸಾಚಾರದ ಸಿದ್ಧಾಂತದ ವಿರುದ್ಧ ಹೋರಾಡುತ್ತಿದ್ದೇವೆ.

* ದೇಶದಲ್ಲಿ ಸಂವಾದಕ್ಕೆ ಅನುಮತಿ ದೊರೆಯುತ್ತಿಲ್ಲ. ಸಂಭಾಷಣೆಗಳು ಗೊಂದಲಕ್ಕೀಡಾಗುತ್ತಿವೆ. ಇದರ ಪರಿಣಾಮವನ್ನು ನಾವು ಅರ್ಥಮಾಡಿಕೊಳ್ಳುತ್ತಿಲ್ಲ.

* ಜನರೊಂದಿಗಿನ ನಮ್ಮ ಸಂಪರ್ಕದ ಕೊಂಡಿ ಕಳಚಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅದನ್ನು ನಾವು ಪುನಶ್ಚೇತನಗೊಳಿಸಬೇಕಿದೆ. ನಾವದನ್ನು ಬಲಪಡಿಸಬೇಕು. ಇದಕ್ಕೆ ಯಾವುದೇ ಅಡ್ಡದಾರಿಗಳಿಲ್ಲ. ಕಠಿಣ ಪರಿಶ್ರಮವೊಂದೇ ಮಾರ್ಗ.

ಸಂಘವಿರೋಧಿ ಕಾರ್ಯಕರ್ತರ ನೇಮಕಕ್ಕೆ ಕಾಂಗ್ರೆಸ್ ಚಿಂತನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.