ನವದೆಹಲಿ: ತಮ್ಮ ಮೇಲಿನಮಾಧ್ಯಮ ವರದಿಗಳು ಹಾಗೂ ಕಾಂಗ್ರೆಸ್ ಆರೋಪಗಳನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮಗಳುಝೋಯಿಶ್ ಇರಾನಿ ಅಲ್ಲಗಳೆದಿದ್ದಾರೆ.

‘ನನ್ನ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳೂ ನಿರಾಧಾರವಾದುದು. ನಾನು ಯಾವುದೇ ರೆಸ್ಟೋರೆಂಟ್‌ನ ಮಾಲೀಕಳೂ ಅಲ್ಲ, ಯಾವುದೇ ರೆಸ್ಟೋರೆಂಟ್‌ನಲ್ಲಿ ಕೆಲಸವನ್ನೂ ಮಾಡುತ್ತಿಲ್ಲ’ ಎಂದಿದ್ದಾರೆ.

ಝೋಯಿಶ್ ಇರಾನಿ ಅವರ ವಕೀಲ ಕಿರಾತ್ ನಾಗ್ರ ಅವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ‘ಸ್ಮೃತಿ ಇರಾನಿ ಅವರ ವಿರೋಧಿಗಳು ಮಾಡಿರುವ ರಾಜಕೀಯ ಪ್ರೇರಿತ ಆರೋಪ ಇದು. ರಾಜಕೀಯ ನಾಯಕಿಯೊಬ್ಬರ ಮಗಳು ಎನ್ನುವ ಕಾರಣಕ್ಕಾಗಿ ಮಾತ್ರ ಝೋಯಿಶ್ ಅವರ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ’ ಎಂದಿದ್ದಾರೆ.

‘ಅವರು ಎನ್ನಲಾದ ಸಿಲ್ಲಿ ಸೋಲ್ಸ್ ಕೆಫೆ ರೆಸ್ಟೋರೆಂಟ್‌ಗೂ ಝೋಯಿಶ್ ಅವರಿಗೂ ಯಾವುದೇ ಸಂಬಂಧವಿಲ್ಲ. ಒಮ್ಮೆ ಆ ರೆಸ್ಟೋರೆಂಟ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದ್ದರು ಅಷ್ಟೆ. ಆಕೆಗೆ ಯಾವುದೇ ಶೋಕಾಸ್ ನೋಟಿಸ್ ಕೂಡ ಬಂದಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ..ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿರುವ ಸ್ಮೃತಿ ಇರಾನಿ ಮಗಳು: ಕಾಂಗ್ರೆಸ್ ಆರೋಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.