l→ಉತ್ತರ ಪ್ರದೇಶವು 70 ವರ್ಷಗಳಲ್ಲಿ ಈವರೆಗೆ 21 ಮುಖ್ಯಮಂತ್ರಿಗಳನ್ನು ಕಂಡಿದೆ. ಆದರೆ, ಯೋಗಿ ಆದಿತ್ಯನಾಥ ಅವರು ಐದು ವರ್ಷಗಳ ಆಡಳಿತ ಪೂರ್ಣಗೊಳಿಸಿ, ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಿರುವ ಮೊದಲ ವ್ಯಕ್ತಿ ಎನಿಸಿದ್ದಾರೆ. ಕಾಂಗ್ರೆಸ್‌ನ ಎನ್.ಡಿ. ತಿವಾರಿ ಅವರು ಅವಿಭಜಿತ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಅವರು ಎರಡನೇ ಅವಧಿಗೆ ಆಯ್ಕೆಯಾದಾಗ ಉತ್ತರ ಪ್ರದೇಶ ವಿಭಜನೆಯಾಗಿ ಹೊಸ ರಾಜ್ಯ ಉತ್ತರಾಖಂಡ ಹುಟ್ಟಿಕೊಂಡಿತ್ತು. ಅವರು ಆ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

l→ಉತ್ತರ ಪ್ರದೇಶದಲ್ಲಿ ಈವರೆಗೆ ಬಿಜೆಪಿಯಿಂದ ನಾಲ್ಕು ಮುಖ್ಯಮಂತ್ರಿಗಳು ಆಯ್ಕೆಯಾಗಿದ್ದಾರೆ. ಆದಿತ್ಯನಾಥ ಅವರಿಗೂ ಮುನ್ನ ಕಲ್ಯಾಣ್ ಸಿಂಗ್, ರಾಮ್ ಪ್ರಕಾಶ್ ಗುಪ್ತಾ, ರಾಜನಾಥ್ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಆದರೆ ಯೋಗಿ ಅವರನ್ನು ಹೊರತುಪಡಿಸಿದರೆ, ಬೇರಾರೂ ಎರಡನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

l→ಕಳೆದ 15 ವರ್ಷಗಳಲ್ಲಿ ರಾಜ್ಯ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾಗಿ ಮುಖ್ಯಮಂತ್ರಿ ಆಗುತ್ತಿರುವ ಮೊದಲ ವ್ಯಕ್ತಿ ಯೋಗಿ ಎನಿಸಿದ್ದಾರೆ. ಯೋಗಿ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗುವ ಮುನ್ನ ಗೋರಖಪುರದ ಸಂಸದರಾಗಿದ್ದರು. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. 2007–2012ರವರೆಗೆ ಮಾಯಾವತಿ, 2012–2017ರವರೆಗೆ ಅಖಿಲೇಶ್ ಅವರು ಪರಿಷತ್ ಸದಸ್ಯರಾಗಿ ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು.

l→ಆಡಳಿತ ಅವಧಿ ಪೂರ್ಣಗೊಳಿಸಿದ ಮುಖ್ಯಮಂತ್ರಿಗಳಲ್ಲಿಯೋಗಿ ಅವರು ಮೂರನೆಯವರಾಗಿದ್ದಾರೆ. ಇವರಿಗೂ ಮುನ್ನ ಮಾಯಾವತಿ ಹಾಗೂ ಅಖಿಲೇಶ್ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದರು.

l→ನವದೆಹಲಿ ಹಾಗೂ ಉತ್ತರ ಪ್ರದೇಶಕ್ಕೆ ಮಹತ್ವದ ಕೈಗಾರಿಕಾ ನಗರ ಎನಿಸಿರುವ ನೋಯ್ಡಾಕ್ಕೆ ಭೇಟಿ ನೀಡಿದವರು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ನಂಬಿಕೆಯನ್ನು ಮುರಿದು, ಅಧಿಕಾರ ಉಳಿಸಿಕೊಂಡವರಲ್ಲಿ ಆದಿತ್ಯನಾಥ ಮೊದಲಿಗರಾಗಿದ್ದಾರೆ. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನೋಯ್ಡಾಕ್ಕೆ ಭೇಟಿನೀಡಿ ಮೆಟ್ರೊ ಮಾರ್ಗ ಉದ್ಘಾಟಿಸಿದ್ದರು. ಇದೀಗ ಯೋಗಿ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.