ಪ್ರತಿದಿನ ಬಿಎಂಟಿಸಿ ಬಸ್ ಪ್ರಯಾಣ ಅನೇಕರ ಪಾಲಿಗೆ ಅನಿವಾರ್ಯ. ತಾಳ್ಮೆಯನ್ನು ಬೇಡುವ ಈ ಪ್ರಯಾಣ ಕೆಲವೊಮ್ಮೆ ಹಿಂಸೆ ಅನ್ನಿಸುವುದೂ ಇದೆ. ಒತ್ತಡದ ಪ್ರಯಾಣದಲ್ಲೂ ಕಣ್ಣು–ಕಿವಿ ತೆರೆದುಕೊಂಡಿದ್ದರೆ ಬಸ್‌ನಲ್ಲಿ ಹೊಸದಾದ ಅನುಭವಲೋಕ ಮನರಂಜನೆಯನ್ನೂ ಕೊಡಬಲ್ಲದು.

ಕಾಲಿಡಲು ಜಾಗವಿಲ್ಲದಷ್ಟು ರಶ್‌ನಲ್ಲಿ ಸೀಟ್ ಸಿಕ್ಕಿಲ್ಲ ಎಂದು ಗೊಣಗುವವರು, ಮಾರುಕಟ್ಟೆಗೆ ಹೊಸದಾಗಿ ಬಂದ ಸೀರೆ, ರವಿಕೆ ಫ್ಯಾಷನ್ ಬಗ್ಗೆ ಮಾತನಾಡುವ ಮಹಿಳೆಯರು, ಆಫೀಸ್‌ಗೆ ಲೇಟ್ ಆಯ್ತು ಎಂದು ಧಾವಂತದಲ್ಲಿರುವವರು ಕಾಣುತ್ತಾರೆ. ಈ ಎಲ್ಲ ಜಂಜಾಟಗಳ ಮಧ್ಯೆ ರಾಜಕೀಯ, ಕ್ರಿಕೆಟ್, ಬಾಲಿವುಡ್, ಸ್ಯಾಂಡಲ್‌ವುಡ್, ಫ್ಯಾಷನ್ ಲೋಕ ತೆರೆದುಕೊಳ್ಳುತ್ತದೆ.

ಟ್ರಂಪ್, ಮೋದಿ, ಇಮ್ರಾಖಾನ್‌ನಿಂದ ಹಿಡಿದು ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಕೂಡ ಬಂದು ಹೋಗುತ್ತಾರೆ. ದಚ್ಚು ಮತ್ತು ಕಿಚ್ಚ ಫೈಟ್ ಸುಳಿದು ಹೋಗುತ್ತದೆ. ಆಲಿಯಾ, ರಣಬೀರ್ ಕಪೂರ್‌ರ ಗಾಸಿಪ್, ರಾಜಮೌಳಿಯ ಹೊಸ ಚಿತ್ರ ಮುಂತಾದವು ಮಾತಿಗೆ ಆಹಾರವಾಗುತ್ತವೆ. ಒಂದರ್ಧ ಗಂಟೆ ಪಯಣ ಅದೆಷ್ಟು ಸ್ವಾರಸ್ಯಕರವಾಗಿರಬಲ್ಲದು ಎನ್ನುವುದನ್ನು ಕೆಳಗಿನ ಮಾತುಗಳಲ್ಲಿ ನೀವೇ ಓದಿ....

ಈಗಿನ ಕಾಲದವರಿಗೆ ವಯಸ್ಸಾದವರಿಗೆ ಸೀಟು ಬಿಟ್ ಕೊಡ್ಬೇಕು ಅನ್ನೋ ಪರಿಜ್ಞಾನವೂ ಇಲ್ವಲ್ರೀ.. ದೊಡ್ಡವರು ಬಂದರೂ ಸೀಟ್ ಬಿಟ್ ಕೊಡಲ್ಲ...

ಅಮ್ಮಾ ತಾಯಿ.. ಇದು ಹಿರಿಯ ನಾಗರಿಕರ ಸೀಟು.. ಎದ್ದೇಳಮ್ಮ.. ಸುಮ್ನೆ ಮೊಬೈಲ್ ಕಿವಿಗೆ ಸಿಕ್ಕಿಸಿಕೊಂಡು ಕೂತು ಬಿಡ್ತಿರಾ ಜಗತ್ತೇ ಮರೆತು ಬಿಟ್ಹಂಗೆ... ಎಂಬ ಹಿರಿಯರ ಗೊಣಗಾಟದಿಂದ ಬಿಎಂಟಿಸಿ ಬಸ್ ದಿನಚರಿ ಆರಂಭವಾಗುತ್ತದೆ.

ಹೊಟ್ಟೆ ಕರಗಿಸಿಕೊಳ್ಳಿ ಅಂಕಲ್

ಸ್ವಲ್ಪ ನಿಧಾನವಾಗಿ ಹೋಗ್ರೋ.. ನಿಮ್ಮ ಸ್ಕೂಲ್ ಬ್ಯಾಗ್ ಒತ್ತಿ ಒತ್ತಿ ಹೊಟ್ಟೆನೋವು ಬಂದು ಬಿಡ್ತು.. ಶರ್ಟ್ ಗುಂಡಿಯೆಲ್ಲಾ ಪಟಾರ್ ಅಂತ ಕಿತ್ಕಂಡು ಬರ‍್ತದೆ. ನೋಡ್ಕೊಂಡ್ ಹೋಗ್ರಪ್ಪಾ ಅಂದ್ರೆ, ‘ರೀ ಅಂಕಲ್ ದಿನಾ ವಾಕ್ ಮಾಡಿ ಚೂರು ಹೊಟ್ಟೆ ಕರಗಿಸಿಕೊಳ್ಳಿ..’ ಅಂತ ವಾಪಸ್ ಹೇಳ್ತವೆ..

ಎಫ್.ಎಂ ಹಾಡು

‘ಯಾವುದ್ರಿ ಇದು ದರಿದ್ರ ಹಾಡುಗಳನ್ನು ಬಸ್‌ನಲ್ಲಿ ಹಾಕಿ ನಮ್ಮನ್ನ ಸಾಯಿಸ್ತಾರೆ, ಅದು ಕೇಳಲೂ ಚೆನ್ನಾಗಿಲ್ಲ, ಕಿವಿ ತೂತಾಗ್ತಾ ಇದೆ..’ ಅಂತ ಯಾರೋ ಕೂಗ್ತಾರೆ. ಡ್ರೈವರ್ ವಾಲ್ಯೂಮ್ ಮತ್ತಷ್ಟು ಜೋರು ಮಾಡುತ್ತಾನೆ!

ಸೀರೆ ಎಲ್ಲಿ ತಂದದ್ದು?

ಸೀರೆ ಚೆನ್ನಾಗಿದೆಯಮ್ಮಾ. ಮೊನ್ನೆ ತಗೊಂಡೆ ಅಂದ್ಯಲ್ಲಾ ಅದೇನಾ ಈ ಸೀರೆ? ಯಾವ್ ಮಾಲ್‌ನಲ್ಲಿ ತೊಗೊಂಡೆ...ಅದೇ ಒಂದು ಸೀರೆ ತೆಗೊಂಡ್ರೆ ಎರಡು ಸೀರೆ ಫ್ರೀ ಅಂತಲ್ಲ ಅಲ್ಲಿ ತೆಗೆದುಕೊಂಡಿದ್ದಾ..

ಇದು ಹೆಂಗಸರ ಸೀಟು. ಗೊತ್ತಾಗೊಲ್ವ.. ಎದ್ದೇಳಿ.. ಓಯ್ ಕಂಡಕ್ಟರ್ ಇವರನ್ನ ಎದ್ದೇಳಿಸಿ.. ನಾವು ಹೇಳಿದರೆ ಕೇಳೋದೇ ಇಲ್ಲಾ.. ಹೆಂಗಸರ ಸೀಟಿನಲ್ಲಿ ಗಂಡಸರು ಕುಳಿತುಕೊಳ್ಳಲು ನಿಮಗೆ ನಾಚಿಕೆ ಆಗೋಲ್ವ..

ಇಂತಹ ದೂರು, ಗೊಣಗಾಟ ಎಲ್ಲಾ ಮಾಮೂಲು ಎಂದು ಉದಾಸೀನ ಮಾಡಿ ಎಲ್ಲ ಕೇಳಿಸಿಯೂ, ಏನೂ ಕೇಳಿಸದವರಂತೆ ಕಿಟಕಿಯಲ್ಲಿ ಮುಖ ಹಾಕಿ ಕುಳಿತವರೇ ಜಾಸ್ತಿ.

ಪಡ್ಡೆ ಹುಡುಗರ ಲೋಕ

‘ಹೇ ನೋಡ್ದಾ ಮಚ್ಚಾ ನಿನ್ನೆ ಕೊಯ್ಲಿ ಹೊಡೆದ ಸಿಕ್ಸ್.. ಅವನು ಸಿಕ್ಸ್ ಹೊಡೆಯೋದು ಗೊತ್ತೇ ಆಗಲ್ಲ ಮಗಾ.. ಸುಮ್ನೆ ಕೈನ ಹಿಂಗಂತಾನೆ.. ಬಾಲ್ ಸಿಕ್ಸ್ ಹೋಗಿರುತ್ತೆ..

ಮೆಟ್ರೊ ಬಂದ ಮೇಲಾದರೂ ಫ್ರೀಯಾಗಿ ಬಸ್‌ನಲ್ಲಿ ಕಾಲೇಜಿಗೆ ಹೋಗಬಹುದು ಅಂತ ಇದ್ವಿ.. ಈಗ ಮೊದಲಿಗಿಂತ ರಶ್ ಜಾಸ್ತಿ. ಹಾಕ್ಕೊಂಡಿರೋ ಡ್ರೆಸ್ಸೆಲ್ಲಾ ಕಾಲೇಜು ಸೇರೋ ಹೊತ್ತಿಗೆ ಹಾಳಾಗಿರುತ್ತೆ..
ಈ ವಾರ ಪೈಲ್ವಾನ್‌ಗೆ ಹೋಗಿದ್ದೆ ಕಣ್ಲಾ... ಅದೇನು ಹೊಸದು ಅನ್ನಿಸಲಿಲ್ಲ.. ಆದರೆ ಸುದೀಪ್ ಆಕ್ಟಿಂಗ್.. ಮೇಕಿಂಗ್ ಚೆನ್ನಾಗಿದೆ ಕಣ್ಲಾ... ಒಂದು ಸಾರಿ ನೋಡಬಹುದು ಅಷ್ಟೇ.

ನಿನ್ನೆ ಸೈನ್ಸ್ ಟೀಚರ್ ಗೂಸ ಕೊಟ್ರು ನೋಡ್ದ.. ಪ್ರಾಕ್ಟಿಕಲ್ ಅಟೆಂಡ್ ಮಾಡ್ಲಿಲ್ಲಾ ಅಂತ ಎಲ್ಲರಿಗೂ ಅಬ್ಸೆಂಟ್ ಹಾಕಿಬಿಟ್ರು.. ನಾನು ಪಿಯುಸಿ ಮುಗಿಸೋದರೊಳಗೆ ಅವರಿಗೆ ಸರಿಯಾಗಿ ಬುದ್ಧಿ ಕಲಿಸ್ತೀನಿ ನೋಡ್ತಾ ಇರು...ಎಂಬ ಗೆಳೆಯನ ಮಾತನ್ನು ಅರ್ಧಕ್ಕೆ ತುಂಡರಿಸುವ ಮತ್ತೊಬ್ಬ, ‘ಆಯ್ತಾಯ್ತು... ನೀನು ಪಿಯುಸಿ ಮುಗಿಸೋ ಅಷ್ಟೊತ್ತಿಗೆ ಅವರು ರಿಟೈರ್ ಆಗಿರ್ತಾರೆ ಅಷ್ಟೇ..!!!’ ಎಂಬ ಮಾತಿನ ಬಾಣ ಬಿಡುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.