ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿರುವ ಎಚ್.ಎನ್. ಸುರೇಶ್ (ಜನನ: 1950) ಬೆಂಗಳೂರಿನ ಸಾಂಸ್ಕೃತಿಕ ಕ್ಷೇತ್ರದ ಸುಪರಿಚಿತ ಹೆಸರು. ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮ, ಗಾಂಧಿ ಕುರಿತ ಅಧ್ಯಯನ, ಪುಸ್ತಕ-ನಿಯತಕಾಲಿಕಗಳ ಪ್ರಕಟಣೆ ಹೀಗೆ ಹತ್ತಾರು ಕೆಲಸಗಳ ಹೊಣೆ ಹೊತ್ತಿದ್ದಾರೆ. ಕೇಂದ್ರ ಸರ್ಕಾರದ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ನ ಸಲಹಾ ಸಮಿತಿಯ ಸದಸ್ಯರಾಗಿಯೂ ಅವರು ಮುಂದುವರೆಯುತ್ತಿದ್ದಾರೆ.

ಇದೀಗ, ಜುಲೈ 16ರ ಭಾನುವಾರ ಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್ ಸಂಸ್ಥೆ ಸುರೇಶ್ ಅವರಿಗೆ 'ಸಾಮ ಪುರಸ್ಕಾರ' ಪ್ರದಾನ ಮಾಡಲಿದೆ.

2009ರಲ್ಲಿ ಸ್ಥಾಪನೆಯಾದ ಶ್ರೀ ಅಕಾಡೆಮಿ ಪ್ರತಿ ವರ್ಷ ನಡೆಸುವ ಈ ಕಾರ್ಯಕ್ರಮ ತನ್ನ ವೈಶಿಷ್ಟ್ಯತೆಗಳಿಂದ ಆಕರ್ಷಿಸುತ್ತದೆ. ಸಂಗೀತವಲ್ಲದೆ ಚಿತ್ರಕಲೆಯೂ ಮಿಳಿತವಾಗಿ 12 ಗಂಟೆಗಳ ಅಖಂಡ ಕಾರ್ಯಕ್ರಮ ನಡೆಯುತ್ತದೆ. ಇದೇ ಸಂದರ್ಭದಲ್ಲಿ ನಡೆಯುವ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಲಿದ್ದಾರೆ.

108 ಕುಂಚ ಕಲಾವಿದರು ಪಾಲ್ಗೊಳ್ಳಲಿರುವ ಅಷ್ಟೋತ್ತರ ಶತ ಕುಂಚ ಸಮ್ಮಿಲನದಲ್ಲಿ ಭಾರತೀಯ ಸಂಸ್ಕೃತಿಯನ್ನು ಕುರಿತು ಸ್ಥಳದಲ್ಲೇ ಚಿತ್ರ ರಚಿಸಲಿದ್ದಾರೆ. ಈ ಚಿತ್ರಗಳ ಮಾರಾಟದಿಂದ ಸಂಗ್ರಹವಾಗುವ ಹಣ ಯೋಧರ ಕಲ್ಯಾಣಕ್ಕೆ ಬಳಕೆಯಾಗುವುದು ಇನ್ನೊಂದು ವಿಶೇಷ. ಸಮಾರಂಭದಲ್ಲಿ ನೃತ್ಯ ಕಾರ್ಯಕ್ರಮಗಳೂ ಇರಲಿವೆ.

ಶಾಸ್ತ್ರೀಯ ಸಂಗೀತ, ಜಾನಪದ, ಚಿತ್ರಕಲೆ, ಸಾಹಿತ್ಯ, ಕ್ರೀಡಾಕ್ಷೇತ್ರಗಳ ಗಣ್ಯರಿಗೆ ಪ್ರತಿವರ್ಷ 'ಸಾಮ ಪುರಸ್ಕಾರ' ನೀಡಿ ಗೌರವಿಸಲಾಗುತ್ತಿದೆ. ಈ ಎಲ್ಲಾ ಯೋಜನೆಗಳ ರೂವಾರಿ ಪಿಟೀಲು ವಿದ್ವಾನ್ ಡಾ. ಆರ್. ರಘುರಾಂ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.