ಎರಡೂವರೆ ವರ್ಷಗಳ ಬ್ರೇಕ್‌ನ ನಂತರ ಪ್ರಿಯಾಂಕಾ ಮತ್ತೆ ಬಾಲಿವುಡ್‌ನಲ್ಲಿ ಮಿಂಚಲಿದ್ದಾರೆ. ಅದೂ ಸಲ್ಮಾನ್ ಖಾನ್ ‘ಭಾರತ್’ ಚಿತ್ರದ ಮೂಲಕ.

2016ರಲ್ಲಿ ಜೈ ಗಂಗಾಜಲ್ ಚಿತ್ರದಲ್ಲಿ ಎಸ್‌ಪಿ ಪಾತ್ರ ನಿರ್ವಹಿಸಿದ್ದೇ ಬಾಲಿವುಡ್‌ನಿಂದ ಹಾಲಿವುಡ್‌ಗೆ ಪ್ರಯಾಣ ಬೆಳೆಸಿದ್ದರು. ನ್ಯೂಯಾರ್ಕ್‌ನಲ್ಲಿ ಕ್ವಾಂಟಿಕೊ ಸರಣಿ ಟೀವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಇದೇ ಸಮಯದಲ್ಲಿ ಬೇವಾಚ್ ಚಿತ್ರದಲ್ಲಿಯೂ ಪಾತ್ರನಿರ್ವಹಿಸಿದ್ದರು. ಪಿಗ್ಗಿ ಇನ್ನು ಭಾರತಕ್ಕೆ ಕಾಲಿಡುವುದೇ ಇಲ್ಲ, ಅಲ್ಲಿಯೇ ಕೆರಿಯರ್ ನಿರ್ಮಿಸಿಕೊಳ್ಳಬಹುದು ಎಂದು ಬಾಲಿವುಡ್‌ನ ಪಡಸಾಲೆಯಲ್ಲಿ ಮಾತುಗಳು ಹರಿದಾಡುವಾಗಲೇ ಪ್ರಿಯಾಂಕಾ ಮರಳಿ ಬರುವುದು ಖಚಿತವಾಗಿದೆ.

ಅಲಿ ಅಬ್ಬಾಸ್ ಝಫರ್ ನಿರ್ದೇಶನದ ಭಾರತ್ ಚಿತ್ರವು ಓಡ್ ಟು ಮೈ ಫಾದರ್ ಎಂಬ ಕೊರಿಯನ್ ಚಿತ್ರದ ಕಥೆಯನ್ನು ಭಾರತೀಯ ಜಾಯಮಾನಕ್ಕೆ ಅಳವಡಿಸಿಕೊಂಡು ಮಾಡಲಾಗುತ್ತಿದೆ. ಇದರಲ್ಲಿ ಪಿಗ್ಗಿಯದು ದನಗಾಹಿ ಪಾತ್ರ. ಆದರೆ ಇಡೀ ಚಿತ್ರದ ಆತ್ಮವೇ ಈ ಪಾತ್ರವಾಗಿದೆ. ಈ ಪಾತ್ರದ ಮೂಲಕವೇ ಚಿತ್ರಕ್ಕೆ ಒಂದು ಮುಖ್ಯವಾದ ತಿರುವು ಸಿಗುತ್ತದೆ. ಸಲ್ಮಾನ್ ಖಾನ್ ಪಾತ್ರಕ್ಕೆ ಸರಿಗಟ್ಟುವಂಥ ಪಾತ್ರ ಇದು. ಇದನ್ನು ನಿಭಾಯಿಸಲು ಪ್ರಿಯಾಂಕ ಮಾತ್ರ ಸೂಕ್ತ ಎಂದು ಅಲಿ ಅಬ್ಬಾಸ್‌ಗೆ ಅನಿಸಿದ್ದೇ ತಡ, ನಿರ್ಮಾಪಕ ಅತುಲ್ ಅಗ್ನಿಹೋತ್ರಿ ಜೊತೆಗೆ ನ್ಯೂಯಾರ್ಕ್‌ಗೆ ಹಾರಿದ್ದರು.

ಕಥೆ ಕೇಳಿಸಿಕೊಂಡ ಪ್ರಿಯಾಂಕ ಕೂಡಲೇ ಬರಲೊಪ್ಪಿದರು. ಸಲ್ಮಾನ್ ಮತ್ತು ಪ್ರಿಯಾಂಕ ಹತ್ತು ವರ್ಷಗಳ ಹಿಂದೆ ಒಟ್ಟಿಗೆ ನಟಿಸಿದ್ದರು. ಮುಝ್ಸೆ ಶಾದಿ ಕರೋಗಿ, ಸಲಾಮ್ ಎ ಇಷ್ಕ್ ಮತ್ತು ಗಾಡ್ ತುಸ್ಸಿ ಗ್ರೇಟ್ ಹೋ. ನಿರ್ದೇಶಕ ಅಬ್ಬಾಸ್ ಅಲಿ ಝಫರ್ ಅವರ ಗುಂಡೆ ಚಿತ್ರದಲ್ಲಿಯೂ ಪ್ರಿಯಾಂಕ ಚೋಪ್ರಾ ಮುಖ್ಯ ಪಾತ್ರ ನಿರ್ವಹಿಸಿದ್ದರು.

ಮೂವರಿಗೂ ಅವರವರ ಕೆಮೆಸ್ಟ್ರಿ ಚೆನ್ನಾಗಿ ವರ್ಕೌಟ್ ಆಗುವುದೆಂಬ ಭರವಸೆ ಇದೆ. ಭಾರತ್ ತಂಡದೊಂದಿಗೆ ಕೆಲಸ ಮಾಡಲು ತಾವೂ ಉತ್ಸುಕರಾಗಿದ್ದೇವೆ ಎಂದು ಪ್ರಿಯಾಂಕಾ ಈ ಸುದ್ದಿಯನ್ನು ಖಚಿತಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.