ಎರಡು ವರ್ಷಗಳ ಬಿಡುವಿನ ನಂತರ ‘ಮೇರಿ ಪ್ಯಾರಿ ಬಿಂದು’ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಪರಿಣೀತಿ ಚೋಪ್ರಾ.

‘ಕಿಲ್ ದಿಲ್’ ಸಿನಿಮಾದ ನಂತರ ಪರಿಣೀತಿ ಎರಡು ಸಿನಿಮಾಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಎರಡು ವರ್ಷದ ವಿರಾಮ ಅವರ ಬದುಕಿನಲ್ಲಿ ಸಾಕಷ್ಟು ಬದಲಾವಣೆ ತಂದಿದೆ.

‘ಮೂರು ವರ್ಷ ನಿರಂತರವಾಗಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡ ಕಾರಣ ಒತ್ತಡವೆನ್ನಿಸಿತು. ಸ್ವಲ್ಪ ವಿರಾಮ ಅಗತ್ಯವೆನ್ನಿಸಿತು. ಸುಮಾರು ಒಂಬತ್ತು ತಿಂಗಳು ಚೆನ್ನಾಗಿ ನಿದ್ದೆ ಮಾಡಿದ್ದೆ. ಈ ಸಮಯ ನನ್ನ ಆತ್ಮಾವಲೋಕನಕ್ಕೆ ನೆರವಾಯಿತು’ ಎಂದು ಬಿಡುವಿನ ಗಳಿಗೆಯನ್ನು ನೆನೆದಿದ್ದಾರೆ.

‘ಈ ಸಮಯದಲ್ಲಿ ಸ್ವಂತ ಮನೆಯನ್ನು ಕೊಂಡು ಕೊಂಡಿದ್ದೇನೆ. ಈಗ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗಿದೆ. ಹಿಂದಿಗಿಂತಲೂ ಚೆನ್ನಾಗಿ ಪಾತ್ರ ನಿರ್ವಹಿಸಬಲ್ಲೆ ಎಂಬ ಆತ್ಮವಿಶ್ವಾಸ ನನ್ನದಾಗಿದೆ’ ಎಂದಿದ್ದಾರೆ.

ಅಕ್ಷಯ್ ರಾಯ್ ನಿರ್ದೇಶನದ ಮೇರಿ ಪ್ಯಾರಿ ಬಿಂದು ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಮೇ 12ರಂದು ತೆರೆಗೆ ಬರುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.