ನವದೆಹಲಿ: ‘ಕಳೆದ ಡಿಸೆಂಬರ್ 24ರಿಂದ ಇದೇ 3ರವರೆಗೆ ವಿದೇಶಿ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, 124 ಪ್ರಯಾಣಿಕರಲ್ಲಿ ಒಮೈಕ್ರಾನ್ ವೈರಾಣುವಿನ 11 ಉಪತಳಿಗಳು ಪತ್ತೆಯಾಗಿವೆ’ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

‘ಈ ಎಲ್ಲ ಉಪತಳಿಗಳು ಈ ಮುನ್ನ ಭಾರತದಲ್ಲಿ ವರದಿಯಾಗಿವೆ’ ಎಂದೂ ಅವರು ಹೇಳಿದರು.

‘ವಿಮಾನ, ಹಡಗು ಹಾಗೂ ಭೂ ಸಾರಿಗೆ ಮೂಲಕ ದೇಶಕ್ಕೆ ಬಂದ ಒಟ್ಟು 19,277 ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಈ ಪ್ರಯಾಣಿಕರಲ್ಲಿ 12 ಮಂದಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರನ್ನೂ ಪ್ರತ್ಯೇಕವಾಗಿರಿಸಲಾಗಿದೆ’ ಎಂದರು. 14 ಮಾದರಿಗಳಲ್ಲಿ ಎಕ್ಸ್‌ಬಿಬಿ ಹಾಗೂ ಒಂದು ಮಾದರಿಯಲ್ಲಿ ಬಿಎಫ್.7.4.1 ಉಪತಳಿ ಪತ್ತೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಪ್ರತಿಕ್ರಿಯಿಸಿದ್ದು, ಅನವಶ್ಯಕವಾಗಿ ಯಾರೂ ಗಾಬರಿಯಾಗಬಾರದು. ಆದರೆ, ಸದಾ ಎಚ್ಚರಿಕೆಯಿಂದಿರಿ. ಸರ್ಕಾರ ಹೊರಡಿಸಿರುವ ನಿರ್ದೇಶನಗಳನ್ನು ಅನುಸರಿಸಿ. ಕೋವಿಡ್‌ಗೆ ಸಂಬಂಧಿಸಿದಂತೆ ತಪ್ಪು ದಾರಿಗೆ ಎಳೆಯುವ ಯಾವುದೇ ವರದಿಗೆ ಕಿವಿಗೊಡಬೇಡಿ ಎಂದು ನಾಗರಿಕರಲ್ಲಿ ಕೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.