ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಬೆಟ್ಟದಲ್ಲಿ ಏಡಿ ಹಿಡಿಯಲು ಹೋಗಿ ದಾರಿ ತಪ್ಪಿ ಸಿಕ್ಕಿಬಿದ್ದ ಐವರು ಬಾಲಕರನ್ನು ಶುಕ್ರವಾರ ರಾತ್ರಿ ನಡೆಸಿದ ಸುಮಾರು ಏಳು ತಾಸಿನ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ಒಡಹುಟ್ಟಿದವರು ಸೇರಿದಂತೆ ಬಾಲಕರು ಅಂದಾಜು 12 ವಯಸ್ಸಿನವರು ಆಗಿದ್ದಾರೆ.

ಆಜಾದ್ ನಗರ ಪ್ರದೇಶದ ದರ್ಗಾ ಗಲ್ಲಿಯ ಐವರು ಬಾಲಕರು ಏಡಿ ಹಿಡಿಯುವುದಕ್ಕಾಗಿ ಸಂಜೆ 5 ಗಂಟೆ ಸುಮಾರಿಗೆ ಮುಂಬ್ರಾ ಖಾದಿ ಗುಡ್ಡಗಾಡಿನ ಪ್ರದೇಶಕ್ಕೆ ತೆರಳಿದ್ದರು. ಆದರೆ ದಾರಿ ತಪ್ಪಿದ ಬಾಲಕರು ಕೂಗಾಡುತ್ತಿರುವುದು ಆ ಹಾದಿಯಲ್ಲಿ ಹೋಗುತ್ತಿದ್ದ ಕೆಲವರಿಗೆ ಕೇಳಿಸಿತ್ತು. ಆದರೆ ಮಕ್ಕಳನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಲಾಯಿತು ಎಂದು ಥಾಣೆ ಮುನ್ಸಿಪಲ್ ಕಾರ್ಪೋರೇಷನ್ (ಟಿಎಂಸಿ) ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ (ಆರ್ಡಿಎಂಸಿ) ಮುಖ್ಯಸ್ಥ ಯಾಸಿನ್ ತದ್ವಿ ತಿಳಿಸಿದ್ದಾರೆ.

ಆರ್ಡಿಎಂಸಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ಅಗ್ನಿಶಾಮಕ ದಳ ಮತ್ತು ಇತರರನ್ನು ಒಳಗೊಂಡ ವಿವಿಧ ತಂಡಗಳು ರಾತ್ರಿಯಿಡೀ ಕಾರ್ಯಾಚರಣೆಯನ್ನು ನಡೆಸಿತು.

ಗುಡ್ಡಗಾಡು ಪ್ರದೇಶ, ಕಗ್ಗತ್ತಲೆ ಹಾಗೂ ಮಳೆಯಿಂದಾಗಿ ಕಾರ್ಯಾಚರಣೆಯು ಸವಾಲಿನಿಂದ ಕೂಡಿತ್ತು. ಮುಂಜಾನೆ 3 ಗಂಟೆ ಹೊತ್ತಿಗೆ ಬಾಲಕರನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಲಾಯಿತು ಎಂದು ತಿಳಿಸಿದ್ದಾರೆ.
.ಥಾಣೆ | 720 ಮತದಾರರ ಗುರುತಿನ ಚೀಟಿ ಪತ್ತೆ: ಪ್ರಕರಣ ದಾಖಲು .ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ₹11 ಕೋಟಿ ಬಹುಮಾನ ಘೋಷಿಸಿದ ಮಹಾರಾಷ್ಟ್ರ CM.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.