ಮಹಾರಾಷ್ಟ್ರ ಕೃಷಿ ಸಚಿವರಿಗೆ ಕೋವಿಡ್
ಮುಂಬೈ: ಮಹಾರಾಷ್ಟ್ರದ ಕೃಷಿ ಸಚಿವ ಧನಂಜಯ್ ಮುಂಡೆ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೋಮವಾರ ತಿಳಿಸಿದ್ದಾರೆ. ‘ವೈರಲ್ ಸೋಂಕಿನ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದು ಕೋವಿಡ್ ತಡೆಗೆ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಪವಾರ್ ಸುದ್ದಿಗಾರರಿಗೆ ತಿಳಿಸಿದರು. ಮುಂಡೆ ಅವರಿಗೆ ಕೋವಿಡ್ ದೃಢಪಟ್ಟಿರುವುದನ್ನು ಅವರ ಕಚೇರಿಯು ಖಚಿತಪಡಿಸಿದೆ. ಆದರೆ ಅವರಿಗೆ ಕಾಣಿಸಿರುವ ಕೋವಿಡ್ ರೂಪಾಂತರಿ ತಳಿಯ ವಿವರ ಬಹಿರಂಗಪಡಿಸಿಲ್ಲ.