ಶ್ರೀನಗರ: ರಿಯಾಜ್ ನೈಕೊ ಸಾವಿನ ನಂತರ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಮುಖ್ಯಸ್ಥನನ್ನಾಗಿ ಸೈಫುಲ್ಲಾ ಮೀರ್ ಅಲಿಯಾಸ್ ಹೈದರ್ ಘಾಜಿ ನೇಮಕವಾಗಿದ್ದಾನೆ.

ಸಂಘಟನೆಯಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ವಕ್ತಾರ ಸಲೀಂ ಹಶ್ಮಿ,ಹೈದರ್ ಘಾಜಿ (26) ನೇಮಕವನ್ನು ಘೋಷಿಸಿದ್ದಾನೆ.ಮತ್ತೊಬ್ಬ ಉಗ್ರ ಜಾಫರ್-ಉಲ್-ಇಸ್ಲಾಂನನ್ನು ಉಪ ಮುಖ್ಯಸ್ಥನಾಗಿ, ಅಬು ತಾರಿಖ್ ಎಂಬಾತನನ್ನು ಸಲಹೆಗಾರನನ್ನಾಗಿ ನೇಮಿಸಲಾಗಿದೆ.

ಪಿಯುಸಿ ಪಾಸಾಗಿರುವ ಹೈದರ್, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯವನು. ಈತನಿಗೆಹೈದಾರ್ ಘಾಜಿ ಎಂದು ಹೆಸರಿಟ್ಟಿದ್ದೇನೈಕೊ.

ರಿಯಾಜ್ ನೈಕೊ ಜೊತೆಗೆ ಆಪ್ತ ಸಂಬಂಧ ಹೊಂದಿದ್ದ ಹೈದರ್‌ಗೆ ಆತನ, ಸಂಪೂರ್ಣ ಕಾರ್ಯಚಟುವಟಿಕೆ ಮತ್ತು ಸಂಪರ್ಕ ಜಾಲಗಳ ಮಾಹಿತಿ ಇದೆ.ಸಂಘಟನೆಗೆ ಆರ್ಥಿಕ ನೆರವು ಪಡೆಯುವುದರ ಜೊತೆಗೆ ಸ್ಥಳೀಯ ಯುವಕರನ್ನು ಸಂಘಟನೆಗೆ ಆಕರ್ಷಿಸುವ ಕಲೆಯನ್ನು ನೈಕೂನಿಂದ ಹೈದರ್ ಕಲಿತಿರುವ ಕಾರಣಕ್ಕೆ ಈತನನ್ನು ಮುಖ್ಯಸ್ಥನಾಗಿ ನೇಮಿಸಲಾಗಿದೆ.

ಪೊಲೀಸ್ ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಉಗ್ರರಿಗೆ ಸೈಫುಲ್ಲಾ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದ. ಹಾಗಾಗಿ ಆತನನ್ನು ‘ಡಾಕ್ಟರ್ ಸೈಫ್’ ಎಂದು ಸಹ ಕರೆಯಲಾಗುತ್ತದೆ.

ಸಂಘಟನೆಯ ಮುಖ್ಯಸ್ಥನಾಗಿದ್ದ ರಿಯಾಜ್ ನೈಕೊ ಎಂಬಾತನನ್ನು ಭದ್ರತಾ ಪಡೆ ಸಿಬ್ಬಂದಿ ಇತ್ತೀಚೆಗೆ ಹೊಡೆದುರುಳಿಸಿದ್ದರು. ಪ್ರಭಾವಿ ನಾಯಕನಾಗಿದ್ದ ನೈಕೊ ಸಾವಿನಿಂದ ಸಂಘಟನೆಗೆ ಭಾರಿ ಹಿನ್ನಡೆ ಉಂಟುಮಾಡಿದೆ ಎಂದು ಭದ್ರತಾ ಪಡೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.