ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ದೇಶದಾದ್ಯಂತ ಜಾರಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.

‘ಹಿಂದುಸ್ಥಾನ್ ಟೈಮ್ಸ್’ ಪತ್ರಿಕೆಯು ರಾಂಚಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿರುವ ಅಕ್ರಮ ವಲಸಿಗರನ್ನು ಗುರುತಿಸಲು ಇದು ಅನಿವಾರ್ಯ ಎಂದು ಅವರು ತಿಳಿಸಿದರು.

‘ಭಾರತೀಯನೊಬ್ಬ ಅಮೆರಿಕ, ಬ್ರಿಟನ್, ರಷ್ಯಾಕ್ಕೆಅಕ್ರಮವಾಗಿ ನುಸುಳಿ ಅಲ್ಲಿ ನೆಲೆಸುವುದಕ್ಕೆ ಸಾಧ್ಯವೇ? ಹಾಗಾದರೆ, ಬೇರೆ ದೇಶದವರು ಯಾವುದೇ ದಾಖಲೆಗಳಿಲ್ಲದೆ ಭಾರತಕ್ಕೆ ಬಂದು ನೆಲೆಸುವುದು ಹೇಗೆ? ಹಾಗಾಗಿಯೇ ದೇಶದಾದ್ಯಂತ ಎನ್‌ಆರ್‌ಸಿ ಜಾರಿಯಾಗಬೇಕು ಎಂಬುದು ನನ್ನ ನಂಬಿಕೆ’ ಎಂದು ಅವರು ಹೇಳಿದರು.

ಇದನ್ನೂ ಓದಿ:ಅಸ್ಸಾಂ, ರಾಷ್ಟ್ರೀಯ ಪೌರತ್ವ ನೋಂದಣಿ: ದೇಶವಿಭಜನೆಯೇ ವಲಸೆಗೆ ಮೂಲ

‘ಈ ದೇಶದ ಎಲ್ಲ ಪೌರರ ಪಟ್ಟಿ ಸಿದ್ಧವಾಗಲಿದೆ. ಎನ್‌ಆರ್‌ಸಿ ಎಂದರೆ ರಾಷ್ಟ್ರೀಯ ಪೌರತ್ವ ನೋಂದಣಿಯೇ ಹೊರತು ಅಸ್ಸಾಂ ಪೌರತ್ವ ನೋಂದಣಿ ಅಲ್ಲ’ ಎಂದರು. ಸುಪ್ರೀಂ ಕೋರ್ಟ್ ಸೂಚನೆಯಂತೆ ಅಸ್ಸಾಂನಲ್ಲಿ ಎನ್‌ಆರ್‌ಸಿ ಪ್ರಕ್ರಿಯೆನಡೆದು ಅಂತಿಮ ಪಟ್ಟಿ ಆ. 31ರಂದು ಪ್ರಕಟವಾಗಿದೆ. ಸುಮಾರು 19 ಲಕ್ಷ ಜನರನ್ನು ಪಟ್ಟಿಯಿಂದ ಹೊರಗೆ ಇರಿಸಲಾಗಿದೆ.ಅಸ್ಸಾಂನ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಶಾ ಬಲವಾಗಿ ಬೆಂಬಲಿಸಿದ್ದರು. ಅಕ್ರಮ ವಲಸಿಗರು ಗೆದ್ದಲು ಇದ್ದಂತೆ, ದೇಶಕ್ಕೆ ಮಾರಕ. ಅವರನ್ನು ಗುರುತಿಸಿ ಹೊರಗೆ ದಬ್ಬಲು ಎನ್‌ಆರ್‌ಸಿ ಅನಿವಾರ್ಯ ಎಂದಿದ್ದರು.

ಇವನ್ನೂ ಓದಿ:

ಅಕ್ರಮ ವಲಸಿಗರನ್ನು ಹೊರದಬ್ಬುವೆವು: ಶಾ

ಎನ್‌ಆರ್‌ಸಿ: 19 ಲಕ್ಷ ಜನರ ಭವಿಷ್ಯ ಅತಂತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.