ಚೆನ್ನೈ: ಅದೊಂದು ಅವಿಸ್ಮರಣೀಯ ಘಟನೆ! ಪದವಿ ಪ್ರದಾನ ಸಮಾರಂಭದಲ್ಲೆಯುವತಿಗೆ ಪ್ರೇಮ ನಿವೇದನೆ ಮಾಡಿದ ಸೇನಾಧಿಕಾರಿಯಪ್ರೇಮ್ ಕಹಾನಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತೀಯ ಸೇನೆಯ ’ಅಧಿಕಾರಿ ತರಬೇತಿ ಅಕಾಡೆಮಿ(ಒಟಿಎ)ಯಿಂದ ಪದವಿ ಪಡೆದಿರುವಠಾಕೂರ್ ಚಂದ್ರೇಶ್ ಸಿಂಗ್ ಎಂಬುವರೆ ಪ್ರೇಮ ನಿವೇದನೆ ಮಾಡಿದ ಸೇನಾ ಅಧಿಕಾರಿ. ಅವರು ಯುವತಿಗೆ ಪ್ರೇಮ ನಿವೇದನೆ ಮಾಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮೆಚ್ಚುಗೆಗೆ ಪಾತ್ರವಾಗಿದೆ.

ಸೇನಾ ಅಧಿಕಾರಿಯ ಪ್ರೇಮ ನೀವದನೆಯನ್ನು ಯುವತಿ ಧಾರಾ ಮೆಹ್ತಾ ಒಪ್ಪಿಕೊಂಡಿದ್ದಾರೆ. 25ವರ್ಷದಠಾಕೂರ್ ಚಂದ್ರೇಶ್ ಸಿಂಗ್ ಸೇನೆಯ ರಜಪೂತ್ ರೈಫಲ್ಸ್‌ನ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.

ಚೆನ್ನೈನಲ್ಲಿರುವ ತರಬೇತಿ ಅಕಾಡೆಮಿಯು ಇತ್ತೀಚೆಗೆ ಪದವಿ ಪ್ರದಾನ ಸಮಾರಂಭ ಆಯೋಜಿಸಿತ್ತು. ಈ ಸಮಾರಂಭದಲ್ಲಿಧಾರಾ ಮೆಹ್ತಾ ಸಹ ಭಾಗವಹಿಸಿದ್ದರು. ಪದವಿ ಪತ್ರ ಸ್ವೀಕರಿಸದ ಬಳಿಕ ಧಾರಾ ಮೆಹ್ತಾ ಬಳಿ ತೆರಳಿ ಮಂಡಿಯೂರಿ ಗುಲಾಬಿ ಹೂಗುಚ್ಚ ನೀಡಿಚಂದ್ರೇಶ್ ಸಿಂಗ್ ಪ್ರೇಮ ನಿವೇದನೆ ಮಾಡಿದರು.

ಈ ಅವಿಸ್ಮರಣಿಯ ಘಟನೆಯ ಪೋಟೊವನ್ನು ಸಾಮಾಜಿಕ ಜಾಲತಾಣಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಈ ಚಿತ್ರವನ್ನು 34 ಸಾವಿರಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದರು. ಇದೀಗ ಇನ್‌ಸ್ಟಾಗ್ರಾಮ್‌ನಿಂದ ಈ ಚಿತ್ರವನ್ನು ತೆಗೆದು ಹಾಕಲಾಗಿದೆ.

ಕಳೆದ ಮೂರು ವರ್ಷಗಳಿಂದ ಚಂದ್ರೇಶ್ ಸಿಂಗ್ ಮತ್ತು ಧಾರಾ ಮೆಹ್ತಾ ಪರಿಚಿತರು. ಇವರು ಮೊದಲು ಪರಿಚಿತರಾಗಿದ್ದು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ. ಇಬ್ಬರು ಬೇರೆ ಬೇರೆ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿದ್ದರೂ ಹಿಂದಿ ತರಗತಿಯಲ್ಲಿ ಒಟ್ಟಿಗೆ ಕುಳಿತು ಪಾಠ ಕೇಳುತ್ತಿದ್ದರು. ಮೊದಲ ಎರಡು ವರ್ಷಗಳಲ್ಲಿ ಕೇವಲ ಹಾಯ್ ಬಾಯ್ ಗೆಳೆಯರಾಗಿದ್ದರು. ನಂತರದ ದಿನಗಳಲ್ಲಿ ಇಬ್ಬರಲ್ಲೂ ಪ್ರೀತಿ ಅಂಕುರಿಸಿತು ಎಂದು ಚಂದೇಶ್ ಸಿಂಗ್ ಹೇಳುತ್ತಾರೆ.

ನಮ್ಮ ಪೋಷಕರಿಗೂ ಹಾಗೂ ಧಾರಾ ಮೆಹ್ತಾ ಪೋಷಕರಿಗೆ ಕರೆ ಮಾಡಿ, ಪದವಿ ಪ್ರಧಾನ ಸಮಾರಂಭದಲ್ಲಿ ಪ್ರೇಮ ನಿವೇದನೆ ಮಾಡುವುದಾಗಿ ತಿಳಿಸಿದ್ದರು. ಇದಕ್ಕೆ ಉಭಯ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು. ಹಿರಿಯ ಸೇನಾ ಅಧಿಕಾರಿಗಳ ಅನುಮತಿ ಪಡೆದು ಪ್ರೇಮ ನಿವೇದನೆ ಮಾಡಿದೆ ಎಂದು ಚಂದ್ರೇಶ್ ಸಿಂಗ್ ಹೇಳಿಕೊಂಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.