ನವದೆಹಲಿ: ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಪತ್ನಿ ಸುನಿತಾ ಕೇಜ್ರಿವಾಲ್ ಹಾಗೂ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿದರು.
.ಅಬಕಾರಿ ನೀತಿ ಹಗರಣ: ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ ಅರ್ಜಿ ತಿರಸ್ಕೃತ .
ಜೈಲು ನಿಯಮಗಳ ಪ್ರಕಾರ ಕೈದಿಯೊಬ್ಬ ವಾರಕ್ಕೆ ಎರಡು ಬಾರಿ ತಾನು ಹೆಸರು ನೀಡಿದ ವ್ಯಕ್ತಿಗಳನ್ನು ಮುಖಾಮುಖಿಯಾಗಿ ಅಥವಾ ವಿಡಿಯೊ ಕಾನ್ಫರೆನ್ಸ್ ಮೂಲಕ ಭೇಟಿ ಮಾಡಬಹುದು. ಏ.1ರಂದು ಇ.ಡಿ ರಿಮಾಂಡ್‌ಗೆ ವಹಿಸಿದ ಬಳಿಕ ಕೇಜ್ರಿವಾಲ್ ಅವರ ಮೊದಲ ಮುಖಾಮುಖಿ ಭೇಟಿ ಇದಾಗಿದೆ.

ಅರ್ಧ ಗಂಟೆ ಭೇಟಿ ಮಾಡಲು ಜೈಲು ಅಧಿಕಾರಿ ಅವಕಾಶ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
.ಅಬಕಾರಿ ಹಗರಣ: ಹೈಕೋರ್ಟ್ ತೀರ್ಪು ವಿರುದ್ಧ ‘ಸುಪ್ರೀಂ’ ಮೊರೆಹೋಗಲಿರುವ ಕೇಜ್ರಿವಾಲ್.
ಕೈದಿ ಹಾಗೂ ಸಂದರ್ಶಕರ ನಡುವೆ ಕಬ್ಬಿಣದ ಮೆಶ್ ಇರುವ ’ಮುಲಾಖಾತ್ ಜಂಗ್ಲಾ’ ವ್ಯವಸ್ಥೆಯಡಿ ಭೇಟಿ ನಡೆಯಿತು. ಈವರೆಗೂ ಕುಟುಂಬ ಸದಸ್ಯರು ವಿಡಿಯೊ ಕಾನ್ಫರೆನ್ಸ್ ಮೂಲಕ ಕೇಜ್ರಿವಾಲ್ ಅವರನ್ನು ಮಾತನಾಡಿಸುತ್ತಿದ್ದರು.

ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಇ.ಡಿಯಿಂದ ಬಂಧಿತರಾಗಿರುವ ಅರವಿಂದ ಕೇಜ್ರಿವಾಲ್, ತಮ್ಮನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದನ್ನು ಇಂದು ಕೋರ್ಟ್ ತಿರಸ್ಕರಿಸಿತ್ತು.

ಜೈಲು ಸಂಖ್ಯೆ ಎರಡಲ್ಲಿ ಕೇಜ್ರಿವಾಲ್ ಅವರನ್ನು ಇಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.