ಗುವಾಹಟಿ:ಎರಡಕ್ಕಿಂತ ಹೆಚ್ಚು ಮಕ್ಕಳಿರುವ ವ್ಯಕ್ತಿಗಳಿಗೆ ಸರ್ಕಾರಿ ಕೆಲಸ ನೀಡಬಾರದು ಎಂಬ ನಿರ್ಧಾರವನ್ನು ಅಸ್ಸಾಂ ಸರ್ಕಾರದ ಸಚಿವ ಸಂಪುಟ ಕೈಗೊಂಡಿದೆ.

ಸೋಮವಾರ ಸಂಜೆ ಈ ರೀತಿ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ ಜನವರಿ1, 2021ರಿಂದ ಇದನ್ನು ಅನುಷ್ಠಾನಕ್ಕೆ ತರಲಿದೆ. ಅದೇ ವೇಳೆ ಹೊಸ ಭೂ ನಿಯಮವನ್ನೂ ಜಾರಿ ಮಾಡಿದೆ. ಇದರ ಪ್ರಕಾರ ಜಮೀನು ಇಲ್ಲದವರಿಗೆ ಮೂರು ಬಿಘಾಜಮೀನು ಮತ್ತು ಮನೆ ನಿರ್ಮಾಣಕ್ಕಾಗಿ ಅರ್ಧ ಬಿಘಾಭೂಮಿ ನೀಡಲಾಗುವುದು. (ಅಸ್ಸಾಂನಲ್ಲಿ 1 ಬಿಘಾ= 16 ಗುಂಟೆ ಜಮೀನು).

'ಸಣ್ಣ ಕುಟುಂಬ'ಗಳಿಗೆ ಮಾತ್ರ ಸರ್ಕಾರಿ ಕೆಲಸ ನೀಡಲಾಗುವುದು.ಎರಡಕ್ಕಿಂತ ಹೆಚ್ಚು ಮಕ್ಕಳು ಇದ್ದರೆ ಅವರಿಗೆ ಸರ್ಕಾರಿ ಕೆಲಸ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಕಚೇರಿ ಹೇಳಿದೆ.

2017 ಸೆಪ್ಟೆಂಬರ್ನಲ್ಲಿ ಅಸ್ಸಾಂ ವಿಧಾನಸಭೆಯು ಜನಸಂಖ್ಯೆ ಮತ್ತು ಮಹಿಳಾ ಅಭಿವೃದ್ಧಿ ನೀತಿಗೆ ಅಂಗೀಕಾರ ನೀಡಿತ್ತು. ಇದರ ಪ್ರಕಾರ ಎರಡು ಮಕ್ಕಳನ್ನು ಹೊಂದಿದವರು ಮಾತ್ರ ಸರ್ಕಾರಿ ಕೆಲಸಕ್ಕೆ ಅರ್ಹರಾಗಿರುತ್ತಾರೆ. ಅದೇ ವೇಳೆ ಈಗಾಗಲೇ ಸರ್ಕಾರಿ ಉದ್ಯೋಗ ಹೊಂದಿರುವವರು ಕೂಡಾ ಎರಡು ಮಕ್ಕಳ ಕುಟುಂಬ ನೀತಿಯನ್ನು ಪಾಲಿಸಬೇಕಾಗುತ್ತದೆ.

ರಾಜ್ಯದಲ್ಲಿ ಬಸ್ ದರವನ್ನು ಶೇ. 25 ಹೆಚ್ಚಳ ಮಾಡುವುದರ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.