ನವದೆಹಲಿ:ದೇಶದ ಶೇ 99ರಷ್ಟು ಮುಸ್ಲಿಮರೂ ಮತಾಂತರಗೊಂಡವರು ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಇಂಡಿಯಾ ಟುಡೆ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಅಯೋಧ್ಯೆಯ ರಾಮಜನ್ಮಭೂಮಿ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಈಚೆಗೆ ನೀಡಿದ ತೀರ್ಪಿನ ಬಗ್ಗೆ ಉಲ್ಲೇಖಿಸಿದರು.

‘ಹಿಂದುಗಳು ಮಾತ್ರವಲ್ಲ, ಮುಸ್ಲಿಮರೂ ಭಗವಾನ್ ರಾಮನನ್ನು ಪೂಜಿಸುತ್ತಿದ್ದರು.ದೇಶದ ಶೇ 99ರಷ್ಟು ಮುಸ್ಲಿಮರೂ ಮತಾಂತರಗೊಂಡವರು. ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ರಾಷ್ಟ್ರೀಯ ಏಕತೆಯ ದೃಷ್ಟಿಕೋನದಿಂದ ನೋಡುತ್ತೇನೆ’ ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮ ಮಂದಿರ ವಿಶ್ವದಲ್ಲೇ ಸುಂದರವಾದದ್ದಾಗಬೇಕು. ಅಯೋಧ್ಯೆಯು ಹಿಂದುಗಳ ಸಂಸ್ಕೃತಿಯನ್ನು ಬಿಂಬಿಸುವಂತೆ ಇರಬೇಕು ಎಂದು ರಾಮ್‌ದೇವ್ ಹೇಳಿದ್ದಾರೆ.

ಇದನ್ನೂ ಓದಿ:ರಾಮಮಂದಿರಕ್ಕೆ ಪ್ರಧಾನಿಯೇ ಶಿಲಾನ್ಯಾಸ ನೆರವೇರಿಸಲಿ: ರಾಮ್‌ದೇವ್

ಶುಕ್ರವಾರ ಉಡುಪಿಯಲ್ಲಿ ಮಾತನಾಡಿದ್ದ ಅವರುಕ್ರೈಸ್ತರ ವ್ಯಾಟಿಕನ್ ಸಿಟಿಯಂತೆ, ಮುಸ್ಲಿಮರ ಮೆಕ್ಕಾ–ಮದೀನಾದಂತೆ, ಸಿಖ್ಖರ ಸ್ವರ್ಣಮಂದಿರದ ಮಾದರಿಯಲ್ಲಿ ಅಯೋಧ್ಯೆಯನ್ನು ಹಿಂದೂಗಳ ಪವಿತ್ರ ಕ್ಷೇತ್ರವಾಗಿ ನಿರ್ಮಾಣ ಮಾಡಬೇಕು. ಜ್ಞಾನ ಮಂದಿರ, ವಿದ್ಯಾಮಂದಿರದ ಜತೆಗೆ ದೇಶದ ಭವ್ಯ ಪರಂಪರೆ ಅನಾವರಣವಾಗಬೇಕು ಎಂದು ಹೇಳಿದ್ದರು.

ಇದನ್ನೂ ಓದಿ:‘ಕ್ರೀಡೆಯಾಗಿ ಯೋಗ ಪರಿಗಣನೆ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.