ನವದೆಹಲಿ:ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) ಕೆಲವು ವಿನಾಯಿತಿಗಳೊಂದಿಗೆ ಹೊಸ ಎಂಜಿನಿಯರಿಂಗ್ ಕಾಲೆಜುಗಳನ್ನು ಸ್ಥಾಪಿಸುವ ನಿಷೇಧವನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಿದೆ ಎಂದು ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುಧೆ ತಿಳಿಸಿದ್ದಾರೆ.

ಹೊಸ ಕಾಲೇಜುಗಳಿಗೆ ಎರಡು ವರ್ಷಗಳವರೆಗೆ ಅನುಮೋದನೆ ನೀಡದಿರಲುಎಐಸಿಟಿಇ 2020ರಲ್ಲಿ ನಿರ್ಧರಿಸಿತ್ತು. ಇದೀಗ ಸರ್ಕಾರ ರಚಿಸಿದ ಸಮಿತಿ ನೀಡಿದ ಶಿಫಾರಸುಗಳನ್ನು ಆಧರಿಸಿ ನಿಷೇಧವನ್ನು ಇನ್ನೆರಡು ವರ್ಷಗಳವರೆಗೆ ವಿಸ್ತರಿಸಿದೆ.

ಸಾಂಪ್ರದಾಯಿಕ, ಉದಯೋನ್ಮುಖ, ಬಹುಶಿಸ್ತೀಯ, ವೃತ್ತಿಪರ ಕ್ಷೇತ್ರಗಳಲ್ಲಿ ಹೊಸ ಪಾಲಿಟೆಕ್ನಿಕ್ ಕೋರ್ಸ್ಗಳನ್ನು ಪಿಪಿಪಿ ಮಾದರಿಯಲ್ಲಿ ಆರಂಭಿಸುವ ರಾಜ್ಯ ಸರ್ಕಾರಗಳ ಪ್ರಸ್ತಾವಕ್ಕೆ ಎಐಸಿಟಿಇ ವಿನಾಯಿತಿ ನೀಡಿದೆ. ಅಂತೆಯೇಕಂಪನಿ ಕಾಯಿದೆ– 2013ರ ಕಲಂ 8ರ ಅಡಿಯಲ್ಲಿ ಸ್ಥಾಪಿಸಲಾದ ಟ್ರಸ್ಟ್, ಸೊಸೈಟಿ, ಕಂಪನಿಯಾಗಿ ನೋಂದಾಯಿಸಿ ಕನಿಷ್ಠ ವಾರ್ಷಿಕ ₹ 5,000 ಕೋಟಿ (ಹಿಂದಿನ ಮೂರು ವರ್ಷಗಳಲ್ಲಿ) ವಹಿವಾಟು ಹೊಂದಿರುವ ಯಾವುದೇ ಸಂಸ್ಥೆಗಳಿಗೆ ಹಾಗೂಹಿಂದಿನ ವರ್ಷದ ಎನ್ಐಆರ್ಎಫ್ನಲ್ಲಿ 100ರೊಳಗಿನ ಶ್ರೇಯಾಂಕ ಹೊಂದಿರುವ ಸಂಸ್ಥೆಗಳಿಗೆ ವಿನಾಯಿತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.