ಪಟನಾ: ಬಿಹಾರದಲ್ಲಿಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಇದೀಗ 16 ಜಿಲ್ಲೆಗಳು ಜಲಾವೃತವಾಗಿದ್ದು 75 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಬಿಹಾರದ ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.

ಸುಮಾರು 1,260 ಪಂಚಾಯತ್ಗಳು ಪ್ರವಾಹ ಪೀಡಿತವಾಗಿದ್ದು ಈವರೆಗೆ 24 ಮಂದಿ ಮೃತಪಟ್ಟಿದ್ದಾರೆ.

ದರ್ಬಂಗಾ ಜಿಲ್ಲೆಯಲ್ಲಿ 10 ಮಂದಿ ಸಾವಿಗೀಡಾಗಿದ್ದು , ಮುಜಾಫರ್ಪುರ್ನಲ್ಲಿ6, ಪಶ್ಚಿಮ ಚಂಪಾರಣ್- 2, ಸರಣ್ ಮತ್ತು ಸಿವಾನ್ನಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) 20 ತಂಡಗಳು ಮತ್ತುರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್ಡಿಆರ್ಎಫ್) 13 ತಂಡಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಈವರೆಗೆ 5,36,371 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದಿದ್ದಾರೆ.

ಇದರ ಜತೆಗೆ ಏಳು ನಿರಾಶ್ರಿತರ ಶಿಬಿರಗಳಲ್ಲಿ 12,479 ಇದ್ದಾರೆ, 9.29 ಲಕ್ಷ ಪ್ರವಾಹ ಸಂತ್ರಸ್ತರಿಗೆ ಕಮ್ಯುನಿಟಿ ಕಿಚನ್ ಮೂಲಕ ಆಹಾರ ಒದಗಿಸಲಾಗಿದೆ.

ಭಾಗ್ಮತಿ, ಬುರ್ಹೀ ಗಂಧಕ್, ಕಮ್ಲಾಬಲನ್ ಮತ್ತು ಖಿರೋಯಿ ನದಿಗಳು ಸೇರಿದಂತೆ ಹಲವು ನದಿಗಳು ಅಪಾಯಮಟ್ಟವನ್ನು ಮೀರಿ ಹರಿಯುತ್ತಿವೆ.
ಭಗಲ್ಪುರ್ ಜಿಲ್ಲೆಯ ಕಹಲ್ಗಾಂವ್ನಲ್ಲಿ ಗಂಗಾ ನದಿ ಅಪಾಯಮಟ್ಟ ಮೀರಿ ತುಂಬಿ ಹರಿಯುತ್ತಿದೆ. ಆದಾಗ್ಯೂ, ಪಟನಾ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.