ಕೂನೂರು: ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನ ಫ್ಲೈಟ್ ರೆಕಾರ್ಡರ್- ಬ್ಲ್ಯಾಕ್ ಬಾಕ್ಸ್ ಅನ್ನು ರಕ್ಷಣಾ ಅಧಿಕಾರಿಗಳು ಗುರುವಾರ ಪತ್ತೆ ಮಾಡಿದ್ದಾರೆ.

ಅಧಿಕಾರಿಗಳು ಅಪಘಾತ ಸ್ಥಳದಿಂದ 300 ಮೀಟರ್‌ನಿಂದ ಒಂದು ಕಿ.ಮೀ.ವರೆಗೆ ಶೋಧ ಕಾರ್ಯ ಕೈಗೊಂಡಿದ್ದರು. ಅಂತಿಮವಾಗಿ ಗುರುವಾರ ಬೆಳಗ್ಗೆ ಬ್ಲಾಕ್ ಬಾಕ್ಸ್ ಸಿಕ್ಕಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹೆಲಿಕಾಪ್ಟರ್‌ನ ಅಂತಿಮ ಕ್ಷಣದ ಸ್ಥಿತಿಗತಿಗಳು ಮತ್ತು ಇತರ ಪ್ರಮುಖ ಮಾಹಿತಿಗಳನ್ನು ಬ್ಲಾಕ್ ಬಾಕ್ಸ್ ಒಳಗೊಂಡಿರುತ್ತದೆ.

ವಿಮಾನವೊಂದರ ಮಾಹಿತಿಯನ್ನು ಒಳಗೊಂಡಿರುವ ಈ ಪೆಟ್ಟಿಗೆಯನ್ನು ಬ್ಲ್ಯಾಕ್ ಬಾಕ್ಸ್ ಎಂದು ಕರೆಯಲಾಗುತ್ತಾದರೂ, ಹೊಳೆಯುವ ಕಿತ್ತಳೆ ಬಣ್ಣದ್ದಾಗಿರುತ್ತದೆ. ಕಾಕ್‌ಪಿಟ್ ಸಂಭಾಷಣೆಯನ್ನೂ ಇದು ಒಳಗೊಂಡಿರುತ್ತದೆ.

ಹೆಲಿಕಾಪ್ಟರ್‌ನ ಅವಶೇಷಗಳ ಹೆಚ್ಚಿನ ಫೋರೆನ್ಸಿಕ್ ಪರೀಕ್ಷೆಯು ಅಪಘಾತಕ್ಕೆ ಬಾಹ್ಯ ಕಾರಣಗಳಿವೆಯೇ ಎಂಬುದನ್ನು ಬಹಿರಂಗಪಡಿಸಲಿದೆ.

ಬ್ಲಾಕ್ ಬಾಕ್ಸ್ ಜೊತೆಗೇ, ಘಟನೆಯಲ್ಲಿ ಬದುಕುಳಿದಿರುವ ಕ್ಯಾಪ್ಟನ್ ವರುಣ್ ಸಿಂಗ್ ಅವರು ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ನೀಡಬಲ್ಲರು. ಆದರೆ, ಅವರು ಶೇ 80ರಷ್ಟು ಸುಟ್ಟಗಾಯಗಳಿಂದಾಗಿ ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಭಾರತೀಯ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್ ಪತನ ಗೊಂಡಿತು. ಈ ದುರಂತದಲ್ಲಿ, ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ (63), ಅವರ ಪತ್ನಿ ಮಧುಲಿಕಾ, 7 ಅಧಿಕಾರಿಗಳು ಹಾಗೂ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.