ನವದೆಹಲಿ:ಬಿಹಾರ ವಿಧಾನಸಭೆ ಚುನಾವಣೆ ಜೊತೆಗೇ, ಹಲವು ರಾಜ್ಯಗಳಲ್ಲಿ ತೆರವಾಗಿದ್ದ ವಿವಿಧ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆಯೂ ಇಂದು ನಡೆಯುತ್ತಿದೆ. ಮಣಿಪುರದ ಸಿಂಗಾಟ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಮೊದಲ ಜಯ ಲಭ್ಯವಾಗಿರುವುದಾಗಿ ಚುನಾವಣಾ ಆಯೋಗ ಘೋಷಿಸಿದೆ.

ಐದು ಉಪಚುನಾವಣಾ ಕ್ಷೇತ್ರಗಳ ಪೈಕಿ ಸಿಂಗಾಟ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜಿನ್ಸುವಾನ್ಹೌ ಜಯಗಳಿಸಿದ್ದಾರೆ.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬಿಜೆಪಿ ಅಭ್ಯರ್ಥಿ ಗಿನ್ಸುವಾನ್ಹೌ ಅವರನ್ನು ಸಿಂಗಾಟ್‌ನಿಂದ ವಿಜೇತರೆಂದು ಘೋಷಿಸಲಾಗಿದ್ದರೆ, ವಾಂಗೋಯಿ ಕ್ಷೇತ್ರದಲ್ಲಿ ಓನಮ್ ಲುಖೋಯ್ ಸಿಂಗ್ ಅವರು 268 ಮತಗಳ ಅಂತರದಿಂದ ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅಭ್ಯರ್ಥಿ ಖುರೈಜಮ್ ಲೋಕನ್ ಸಿಂಗ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ಈ ಮಧ್ಯೆ ಕಾಂಗ್ರೆಸ್‌ನ ಮೊಯಿರಾಂಗ್ಥೆಮ್ ಹೇಮಂತ ಸಿಂಗ್ ಅವರು ವಾಂಗ್‌ಜಿಂಗ್ ಟೆಂಥಾ ಕ್ಷೇತ್ರದಲ್ಲಿ ಬಿಜೆಪಿಯ ಪಾವೊಮ್ ಬ್ರೋಜೆನ್ ಸಿಂಗ್ ವಿರುದ್ಧ 675 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ನವೆಂಬರ್ 7 ರಂದು ರಾಜ್ಯದ ಲಿಲಾಂಗ್, ವಾಂಗ್‌ಜಿಂಗ್ ಟೆಂಥಾ ಮತ್ತು ಸೈತು ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.

ಬಿಹಾರ ವಿಧಾನಸಭಾ ಚುನಾವಣೆ, ಮಧ್ಯ ಪ್ರದೇಶದ 28, ಗುಜರಾತ್‌ನ8 ಕ್ಷೇತ್ರಗಳ ಉಪಚುನಾವಣೆ, ಉತ್ತರ ಪ್ರದೇಶದ ಏಳು, ಜಾರ್ಖಂಡ್, ಕರ್ನಾಟಕ, ನಾಗಾಲ್ಯಾಂಡ್ ಮತ್ತು ಒಡಿಶಾದ ತಲಾ ಎರಡು ಮತ್ತು ಛತ್ತೀಸಗಡ, ಹರಿಯಾಣ ಹಾಗೂ ತೆಲಂಗಾಣದ ತಲಾ ಒಂದೊಂದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.