ಉದಯಪುರ, ರಾಜಸ್ಥಾನ: ಹತ್ಯೆಗೀಡಾದ ಟೇಲರ್ ಕನ್ಹಯ್ಯ ಲಾಲ್ ಕುಟುಂಬಕ್ಕೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ದೇಣಿಗೆ ಸ್ವರೂಪದಲ್ಲಿ ಸಂಗ್ರಹಿಸಿ ₹1 ಕೋಟಿ ನೆರವು ಒದಗಿಸಿದ್ದಾರೆ.

ಕನ್ಹಯ್ಯಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದ ಮಿಶ್ರಾ, ನಮಗೆ ₹1 ಕೋಟಿ ಸಂಗ್ರಹಿಸುವ ಗುರಿ ಇತ್ತು. ಆದರೆ, ಈಗಾಗಲೇ ₹1.70 ಕೋಟಿ ಸಂಗ್ರಹವಾಗಿದೆ ಎಂದರು. ಇದರಲ್ಲಿ ಮನೆ ಸಾಲ ತೀರಿಸಲು, ಮಕ್ಕಳ ಶಿಕ್ಷಣ ಉದ್ದೇಶಕ್ಕಾಗಿ ಕನ್ಹಯ್ಯಲಾಲ್ ಕುಟುಂಬಕ್ಕೆ ₹1 ಕೋಟಿ ವರ್ಗಾಯಿಸಲಾಗುವುದು ಎಂದು ತಿಳಿಸಿದರು.

ಉದಯಪುರ ಟೇಲರ್ ಹತ್ಯೆಯ ಪ್ರಮುಖ ಆರೋಪಿ ಬಿಜೆಪಿ ಸದಸ್ಯ: ಕಾಂಗ್ರೆಸ್ ಗಂಭೀರ ಆರೋಪ

ಉಳಿದಂತೆ, ಹತ್ಯೆ ವೇಳೆ ಗಾಯಗೊಂಡಿರುವ ಈಶ್ವರ್ ಅವರಿಗೆ ₹ 25 ಲಕ್ಷ, ರಾಜಸಮದ್ ಜಿಲ್ಲೆಯಲ್ಲಿ ಗುಂಪು ಹಲ್ಲೆಯಿಂದ ಗಾಯಗೊಂಡಿರುವ ಕಾನ್ಸ್ಟೆಬಲ್ ಸಂದೀಪ್ ಅವರಿಗೆ ₹ 5 ಲಕ್ಷ, ಮಹಾರಾಷ್ಟ್ರದ ಅಮರಾವತಿಯಲ್ಲಿ ಕೊಲೆಗೀಡಾದ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಅವರ ಕುಟುಂಬಕ್ಕೆ ₹ 30 ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ಮಿಶ್ರಾ ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.