ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯ ಸಮೀಪ ಸ್ಫೋಟಕ ತುಂಬಿದ್ದ ವಾಹನ ನಿಲ್ಲಿಸಿದ್ದ ಪ್ರಕರಣ ಹಾಗೂ ಉದ್ಯಮಿ ಮನ್ಸುಖ್ ಹಿರೇನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಏ. 23ರವರೆಗೆ ನ್ಯಾಯಾಂಗ ವಶಕ್ಕೆ ನೀಡಿ ಎನ್ಐಎ ವಿಶೇಷ ನ್ಯಾಯಾಲಯವು ಶುಕ್ರವಾರ ಆದೇಶ ಹೊರಡಿಸಿದೆ.

ಮಾರ್ಚ್ 13ರಂದು ವಾಜೆಯನ್ನು ಬಂಧಿಸಲಾಗಿತ್ತು. ಎನ್ಐಎ ವಿಚಾರಣೆ ಮುಗಿದ ಬಳಿಕ ವಾಜೆ ಅವರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ವಿಶೇಷ ನ್ಯಾಯಾಧೀಶರಾದ ಪಿ.ಆರ್. ಸಿತ್ರೆ ಅವರು ವಾಜೆ ಅವರನ್ನು ಏ. 23ರ ತನಕ ನ್ಯಾಯಾಂಗ ವಶಕ್ಕೆ ನೀಡುವಂತೆ ಆದೇಶಿಸಿದರು.

ಮಾರ್ಚ್ 13ರಿಂದ ಇದುವರೆಗೆ ವಾಜೆ ಅವರನ್ನು ಎನ್ಐಎ ವಶದಲ್ಲಿರಿಸಿಕೊಳ್ಳಲಾಗಿತ್ತು.

ಫೆ. 25ರಂದು ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿತ್ತು. ಈ ವಾಹನವು ಉದ್ಯಮಿ ಮನ್ಸುಖ್ ಹಿರೇನ್ ಎಂಬುವರಿಗೆ ಸೇರಿದ್ದಾಗಿತ್ತು. ಮಾರ್ಚ್ 5ರಂದು ಮನ್ಸುಖ್ ಹಿರೇನ್ ಅವರನ್ನು ನಿಗೂಢವಾಗಿ ಹತ್ಯೆ ಮಾಡಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ವಾಜೆ ಅವರ ಪಾತ್ರ ಇರುವುದನ್ನು ಪುಷ್ಟೀಕರಿಸಲು ಹಲವು ಸಾಕ್ಷ್ಯಾಧಾರಗಳು ದೊರೆತಿದ್ದವು.

ಹಿರೇನ್ ಅವರನ್ನು ಹತ್ಯೆ ಮಾಡಲು ಯೋಜಿಸಲಾಗಿದ್ದ ಸಂಚಿನ ಸಭೆಯಲ್ಲಿ ಸಚಿನ್ ವಾಜೆ ಪಾಲ್ಗೊಂಡಿದ್ದ ಬಗ್ಗೆ ಎನ್ಐಎ ಮಾಹಿತಿ ಕಲೆ ಹಾಕಿತ್ತು. ಇದಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ನ್ಯಾಯಾಲಯದ ಮುಂದಿಟ್ಟ ಎನ್ಐಎ, ಸ್ಫೋಟಕ ತುಂಬಿದ್ದ ವಾಹನ ನಿಲುಗಡೆ ಪ್ರಕರಣದಲ್ಲಿ ಹಿರೇನ್ ಕೂಡಾ ಸಂಚುಕೋರನಾಗಿದ್ದ ಎಂಬ ವಿಷಯವನ್ನೂ ನ್ಯಾಯಾಲಯದ ಗಮನಕ್ಕೆ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.