ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟ್ವಿಟರ್ ಜೊತೆಗಿನ ಜಟಾಪಟಿ ನಡೆದಿರುವಂತೆಯೇ, ಕೇಂದ್ರ ಸರ್ಕಾರ ಟ್ವಿಟರ್ಗೆ ಪರ್ಯಾಯವಾದ, ಸ್ವದೇಶಿಯ ‘ಕೂ’ ಆ್ಯಪ್ ವೇದಿಕೆಯನ್ನು ಮಾಹಿತಿ ಪ್ರಸಾರಕ್ಕೆ ಬಳಸಲು ಚಿಂತನೆ ನಡೆಸಿದೆ.

‘ಕೂ’ ಆ್ಯಪ್ನಲ್ಲಿ ಖಾತೆ ಹೊಂದಬೇಕು. ಯಾವುದೇ ಪ್ರಕಟಣೆ ಇದ್ದರೂ ಈ ವೇದಿಕೆಯಲ್ಲಿಯೇ ಸಾರ್ವಜನಿಕರಿಗೆ ಹಂಚಿಕೊಳ್ಳಬೇಕು ಎಂದುಎಲ್ಲ ಸಚಿವರು, ಹಿರಿಯ ಅಧಿಕಾರಿಗಳಿಗೂ ಸೂಚನೆ ನೀಡುವ ಸಂಭವವಿದೆ.

‘2–3 ಗಂಟೆ ತರುವಾಯ ಟ್ವಿಟರ್ನಲ್ಲೂ ಈ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ಮೊದಲು ‘ಕೂ’ ಆ್ಯಪ್, 30 ನಿಮಿಷದ ನಂತರ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೆ ಮಾಡಬೇಕು ಎಂಬ ಚಿಂತನೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಮಾಹಿತಿ ಹಂಚಿಕೆಗೆ ‘ಕೂ‘ ಆ್ಯಪ್ ಅನ್ನೇ ಬಳಸುವಂತೆ ಕೇಂದ್ರ ಸರ್ಕಾರವು ಎನ್ಡಿಎ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳಿಗೂ ಸೂಚನೆ ನೀಡುವ ಸಂಭವವಿದೆ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.