ರಾಯ್ಪುರ: ಛತ್ತೀಸಗಡಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ ಎಂದು ವೈದ್ಯರು ಮಂಗಳವಾರ ತಿಳಿಸಿದ್ದಾರೆ.

74 ವರ್ಷದ ಜೋಗಿ ಅವರ ನರಮಂಡಲದ ಕಾರ್ಯ ಬಹುತೇಕ ಸ್ಥಗಿತಗೊಂಡಿದೆ. ಸದ್ಯ ಕೋಮಾದಲ್ಲಿರುವ ಅವರಿಗೆ, ಅವರ ನೆಚ್ಚಿನ ಗೀತೆಗಳನ್ನು ಕೇಳಿಸುವ ಮೂಲಕ ‘ಆಡಿಯೊ ಥೆರಪಿ’ ಆರಂಭಿಸಲಾಗಿದೆ.

ಹೃದಯ ಸ್ತಂಭನಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಜೋಗಿ ಅವರನ್ನು ಮೇ 9 ರಂದುಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಜೋಗಿ ಅವರ ಸ್ಥಿತಿ ತುಂಬಾ ಗಂಭೀರವಾಗಿದ್ದು, ಇನ್ನೂ ಕೋಮಾದಲ್ಲಿದ್ದಾರೆ’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುನೀಲ್ ಖೇಮ್ಕಾ ತಿಳಿಸಿದ್ದಾರೆ.

ಮುಂದುವರಿದು, ‘ಅವರ ನರಮಂಡಲದ ಚುಟುವಟಿಕೆ ಬಹುತೇಕ ನಿಂತಿದೆ. ಮಿದುಳನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಲು ವೈದ್ಯರು ಸರ್ವಪ್ರಯತ್ನ ನಡೆಸುತ್ತಿದ್ದಾರೆ. ಅವರ ನೆಚ್ಚಿನ ಗೀತೆಗಳನ್ನು ಕೇಳಿಸುವ ಸಲುವಾಗಿ ಇಯರ್ಫೋನ್ ಅಳವಡಿಸಿ ‘ಆಡಿಯೊ ಥೆರಪಿ’ ಆರಂಭಿಸಿದ್ದೇವೆ. ಆದರೆ, ಇಲ್ಲಿಯವರೆಗೆ ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ’ ಎಂದು ಹೇಳಿದ್ದಾರೆ.

ಹೃದಯ, ರಕ್ತದೊತ್ತಡ ಮತ್ತು ಮೂತ್ರಕೋಶದ ಚಟುವಟಿಕೆಗಳು ನಿಯಂತ್ರಣದಲ್ಲಿವೆ ಎಂದೂ ತಿಳಿಸಿದ್ದಾರೆ.

ಮೊದಲು ಅಧಿಕಾರಿಯಾಗಿದ್ದ ಜೋಗಿ, ಬಳಿಕ ರಾಜಕಾರಣದತ್ತ ಮುಖ ಮಾಡಿದ್ದರು. 2000ನೇ ಇಸವಿಯಲ್ಲಿ ಮಧ್ಯಪ್ರದೇಶ ವಿಭಜಿನೆಯಿಂದಾಗಿ ಛತ್ತೀಸಗಡ ರಚನೆಯಾದಾಗ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಮೊದಲ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮುಖ್ಯಮಂತ್ರಿಯೂ ಆಗಿದ್ದರು.

ಆ ಮೂಲಕ ಛತ್ತೀಸಗಡದ ಮೊದಲ ಮುಖ್ಯಮಂತ್ರಿಯಾಗಿ ಅವರು 2000ನೇ ಇಸವಿಯ ನವೆಂಬರ್ನಿಂದ 2003ರ ನವೆಂಬರ್ವರೆಗೆ ಕಾರ್ಯನಿರ್ವಹಿಸಿದ್ದರು.2016ರಲ್ಲಿ ಕಾಂಗ್ರೆಸ್ನಿಂದ ಹೊರಬಂದುಜನತಾ ಕಾಂಗ್ರೆಸ್ ಛತ್ತೀಸಗಡ ಪಕ್ಷಸ್ಥಾಪಿಸಿದ್ದರು. ಸದ್ಯ ಮಾರ್ವಾಹಿ ಕ್ಷೇತ್ರದ ಶಾಸಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.