ನವದೆಹಲಿ:ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು (ಸಿಎಸ್‌ಐಆರ್) ಪ್ರತಿವರ್ಷ ಕೊಡುವ ‘ಅತ್ಯುತ್ತಮ ತಂತ್ರಜ್ಞಾನ ಪ್ರಶಸ್ತಿ’ ಆಯ್ಕೆಯ ವೇಳೆ ಹಿತಾಸಕ್ತಿ ಸಂಘರ್ಷ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. 2018ನೇ ಸಾಲಿನ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಆರೋಪ ಕೇಳಿಬಂದಿದೆ.

2018ನೇ ಸಾಲಿನಲ್ಲಿ ಚಂಡೀಗಡದ ಮೈಕ್ರೊಬಯಾಲ್ ಸಂಸ್ಥೆಯ ಸಂಶೋಧಕರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಹೃದಯಾಘಾತದ ಸಂದರ್ಭದಲ್ಲಿ ರೋಗಿಗೆ ನೀಡಲಾಗುವ ‘ಕ್ಲಾಟ್ ಬಸ್ಟರ್’ ಔಷಧದ ಸಂಶೋಧನೆಗೆ ಈ ಸಂಸ್ಥೆಯ ಸಂಶೋಧಕರ ತಂಡ ಆಯ್ಕೆಯಾಗಿತ್ತು.

ಆದರೆ ಈ ತಂಡದ ಮುಖ್ಯಸ್ಥರಾಗಿದ್ದ ಗಿರೀಶ್ ಸಹಾನಿ ಅವರು ಸಿಎಸ್‌ಐಆರ್ ನಿರ್ದೇಶಕರಾಗಿದ್ದಾಗಲೇ, ಆ ತಂಡ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಹೀಗಾಗಿ ಗಿರೀಶ್ ಸಹಾನಿ ಅವರ ವಿರುದ್ಧ ಸಿಎಸ್‌ಐಆರ್‌ನ ಹಲವು ಸದಸ್ಯರು ಹಿತಾಸಕ್ತಿ ಸಂಘರ್ಷದ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಸಹಾನಿ ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.