ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಅಲ್ಕಾ ಲಂಬಾ ಸೋಲನುಭವಿಸಿದ್ದಾರೆ.

‘ಈ ಬಾರಿಯ ಚುನಾವಣೆಯಲ್ಲಿ ಹಿಂದೂ ಮತ್ತು ಮುಸ್ಲಿಮರ ಮತಗಳು ಧ್ರುವೀಕರಣಗೊಂಡವು. ದೆಹಲಿಯ ಜನರಿಗಾಗಿ ಕಾಂಗ್ರೆಸ್ ಹೊಸ ಮುಖಗಳೊಂದಿಗೆ ದೀರ್ಘ ಕಾಲದ ಹೋರಾಟಕ್ಕೆ ಸಜ್ಜಾಗಬೇಕು’ ಎಂದು ಅಲ್ಕಾ ಲಂಬಾ ಟ್ವೀಟ್ ಮಾಡಿದ್ದಾರೆ.

ಐದು ಬಾರಿ ಶಾಸಕರಾಗಿದ್ದ ಪ್ರಹ್ಲಾದ್ ಸಿಂಗ್ ಸಹನಾಯ್ 21,409 ಮತಗಳಿಸಿ ಈ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಬಿಜೆಪಿಯ ಸುಮನ್ ಕುಮಾರ್ ಗುಪ್ತಾ 2,775 ಮತಗಳೊಂದಿಗೆ 2ನೇ ಸ್ಥಾನ ಗಳಿಸಿದರು. 869 ಮತಗಳಿಸಿದ ಅಲ್ಕಾ ಲಂಬಾ 3ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

2015ರ ಚುನಾವಣೆಯಲ್ಲಿ ಆಪ್ ಟಿಕೆಟ್ ಮೇಲೆ ಚಾಂದಿನಿಚೌಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲಂಬಾ ಜಯಗಳಿಸಿದ್ದರು. ಆದರೆ ನಂತರದ ದಿನಗಳಲ್ಲಿ ಕೇಜ್ರಿವಾಲ್ ಜೊತೆಗೆ ವೈಮನಸ್ಯ ಮೂಡಿ ಪಕ್ಷದಿಂದ ದೂರ ಸರಿದಿದ್ದರು. ತಮ್ಮ 19ನೇ ವಯಸ್ಸಿನಲ್ಲಿ (1995–96) ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಲಂಬಾ ಬಿಎಸ್ಸಿ ಪದವೀಧರೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.