ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು(ಎಕ್ಯೂಐ) ಶನಿವಾರ ಬೆಳಿಗ್ಗೆ 420ಕ್ಕೂ ಹೆಚ್ಚಿದ್ದು, ‘ಅಪಾಯದ ಸ್ಥಿತಿ’ ಮುಂದುವರಿದಿದೆ. ಕನಿಷ್ಠ ತಾಪಮಾನ 11.4 ಡಿ.ಸೆ. ದಾಖಲಾಗಿದೆ.

38 ನಿಗಾ ಕೇಂದ್ರಗಳ ಪೈಕಿ 9 ಕೇಂದ್ರಗಳಲ್ಲಿ ಎಕ್ಯೂಐ 450ಕ್ಕೂ ಹೆಚ್ಚಿದ್ದು, ‘ತೀವ್ರ ಅಪಾಯ’ದ ಸ್ಥಿತಿ ಇದೆ. 19 ಕೇಂದ್ರಗಳಲ್ಲಿ 400–450 ರ ಆಸುಪಾಸಿನಲ್ಲಿದೆ. ಉಳಿದೆಡೆಯೂ ವಾಯು ಗುಣಮಟ್ಟವು ಕಳಪೆ ಮಟ್ಟದಲ್ಲಿಯೇ ಇದೆ.

ದೆಹಲಿಯಲ್ಲಿ ಭಾನುವಾರದಿಂದ ವಾಯು ಗುಣಮಟ್ಟವು ತೀವ್ರ ಅಪಾಯಕಾರಿ ಹಂತಕ್ಕೆ ಕುಸಿದಿತ್ತು. ಗುರುವಾರ ತುಸು ಇಳಿಕೆಯಾಗಿತ್ತಾದರೂ, ಶುಕ್ರವಾರದಿಂದ ಪರಿಸ್ಥಿತಿ ಮತ್ತೆ ಬಿಗಡಾಯಿಸಿದೆ.

‘135ಕ್ಕೂ ಅಧಿಕ ಟ್ರಕ್ಗಳ ಮಾರ್ಗ ಬದಲಾವಣೆ’

ದೆಹಲಿ ಪರಿಸರ ಸಚಿವ ಗೋಪಾಲ ರಾಯ್ ಅವರು ದೆಹಲಿಯ ಗಡಿ ಭಾಗಗಳಿಗೆ ಶುಕ್ರವಾರ ತಡರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಳಿಯ ಗುಣಮಟ್ಟವು ಅಪಾಯಕಾರಿ ಹಂತಕ್ಕೆ ಕುಸಿದಿದ್ದರಿಂದ ದೆಹಲಿ ಸರ್ಕಾರ ಜಾರಿಗೊಳಿಸಿರುವ ‘ಜಿಆರ್ಎಪಿ –4’ (ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲ್ಯಾನ್) ನಿರ್ಬಂಧಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿದ್ದಾರೆ. ನಿರ್ಬಂಧಗಳನ್ನು ಮೀರಿ ನಗರದೊಳಗೆ ಪ್ರವೇಶಿಸಲು ಯತ್ನಿಸುವ ಟ್ರಕ್ಗಳ ಮಾರ್ಗವನ್ನು ಪ್ರತಿನಿತ್ಯ ಬದಲಾಯಿಸಲಾಗುತ್ತಿದೆ. ನವೆಂಬರ್ 18ರಿಂದ 135ಕ್ಕೂ ಅಧಿಕ ಟ್ರಕ್ಗಳ ಮಾರ್ಗ ಬದಲಾಯಿಸಲಾಗಿದೆ ಎಂದು ಗೋಪಾಲ ರೈ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.