ನವದೆಹಲಿ: ‘ಬಿಜೆಪಿಯು ಎಐಎಡಿಎಂಕೆ ಸದಸ್ಯರನ್ನು ಬಳಸಿಕೊಂಡು ರಾಜ್ಯಸಭೆಯಲ್ಲಿ ಕಲಾಪ ನಡೆಯದಂತೆ ನೋಡಿಕೊಳ್ಳುತ್ತಿದೆ’ ಎಂದು ತೃಣಮೂಲ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯಾನ್ ಆರೋಪಿಸಿದ್ದಾರೆ.

‘ರಾಜ್ಯಸಭೆಯಲ್ಲಿ ಚರ್ಚೆ ನಡೆಯುವುದು ಸರ್ಕಾರಕ್ಕೆ ಬೇಕಿಲ್ಲ. ಹೀಗಾಗಿ ಎಐಎಡಿಎಂಕೆ ಸದಸ್ಯರಿಂದ ಪ್ರತಿಭಟನೆ ನಡೆಸುತ್ತಿದೆ. ವಿರೋಧ ಪಕ್ಷಗಳು ಚರ್ಚೆಗೆ ಸಿದ್ಧವಿದ್ದರೂ, ಎಐಎಡಿಎಂಕೆ ಸದಸ್ಯರ ಪ್ರತಿಭಟನೆಯಿಂದ ಕಲಾಪವನ್ನು ಪ್ರತಿದಿನ ಮುಂದೂಡಲಾಗುತ್ತಿದೆ. ಚಿತ್ರಕಥೆ ಬಿಜೆಪಿಯದ್ದು, ಪ್ರಧಾನ ಪಾತ್ರ ಎಐಎಡಿಎಂಕೆಯದ್ದು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇಬ್ಬರೇ ಬಂದು ಇಂಥದ್ದೇ ಒಡವೆಯನ್ನು ಪ್ರದರ್ಶನಕ್ಕೆ ಇಡಬೇಕು ಎಂದು ನಿರ್ಧರಿಸಲು ಇದು ಅಹಮದಾಬಾದ್ನ ಒಡವೆ ಅಂಗಡಿಯಲ್ಲ. ಇದು ಸಂಸತ್ತು. ತಾನು ಹೇಳಿದಂತೆಯೇ ಇಲ್ಲಿ ಎಲ್ಲಾ ನಡೆಯುತ್ತದೆ ಎಂದು ಸರ್ಕಾರ ಭಾವಿಸಿದ್ದರೆ, ಅದು ತಪ್ಪು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮಣಿದಸರ್ಕಾರ:ಲೋಕಸಭೆಯಲ್ಲಿ ಬಹುಮತ ಇರುವ ಕಾರಣ ಚರ್ಚೆಗೆ ಅವಕಾಶವೇ ಇಲ್ಲದಂತೆ ಸರ್ಕಾರವು ಲಿಂಗಪರಿವರ್ತಿತರ ಹಕ್ಕುಗಳ ರಕ್ಷಣಾ ಮಸೂದೆ ಮತ್ತು ಮಾನವ ಕಳ್ಳಸಾಗಣೆ ತಡೆ ಮಸೂದೆಗೆ ಅನುಮೋದನೆ ಪಡೆದಿತ್ತು. ಆದರೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಒತ್ತಾಯದ ಕಾರಣ ಈ ಎರಡೂ ಮಸೂದೆಗಳನ್ನು ಆಯ್ಕೆ ಸಮಿತಿಯ ಮುಂದಿರಿಸಲು ಸರ್ಕಾರ ಒಪ್ಪಿಕೊಂಡಿದೆ.

ಸದಸ್ಯರ ಗದ್ದಲ ಕಲಾಪ ನುಂಗಿತ್ತಾ...

ಚಳಿಗಾಲದ ಅಧಿವೇಶನ ಆರಂಭವಾದ ದಿನದಿಂದಲೂ ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಯುತ್ತಲೇ ಇದೆ. ಪ್ರತಿದಿನ ಕೆಲವೇ ನಿಮಿಷಗಳಷ್ಟು ಮಾತ್ರ ಕಲಾಪ ನಡೆಯುತ್ತಿದೆ. ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವುದರ ವಿರುದ್ಧ ರಾಜ್ಯಸಭೆಯಲ್ಲಿ ಎಐಎಡಿಎಂಕೆ ಸಂಸದರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸದಸ್ಯರು ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಟಿಡಿಪಿ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂದಿನ ವಾರವೂ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.