ಚಂಡೀಗಢ: ಅಸ್ಸಾಂನ ಡಿಬ್ರೂಗಢದಲ್ಲಿ ಜೈಲುವಾಸ ಅನುಭವಿಸುತ್ತಿರುವ ಸಿಖ್ ಪ್ರತ್ಯೇಕತಾವಾದಿ ನಾಯಕ ಹಾಗೂ ಖದೂರ್ ಸಾಹಿಬ್ ಕ್ಷೇತ್ರದ ಸಂಸದ ಅಮೃತ್ಪಾಲ್ ಸಿಂಗ್ ಅವರ ಜೈಲು ವಾಸದ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ.

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೂ ಒಂದು ದಿನ ಮುಂಚೆ– ಜೂನ್ 3ರಂದು – ಪಂಜಾಬ್ ಸರ್ಕಾರದ ಗೃಹ ವ್ಯವಹಾರ ಮತ್ತು ನ್ಯಾಯ ಇಲಾಖೆಯು ಅಮೃತ್ ಪಾಲ್ ಸಿಂಗ್ ಅವರ ಜೈಲು ವಾಸದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಕುರಿತ ವಿವರಗಳು ಮಾಧ್ಯಮಗಳಿಗೆ ಬುಧವಾರ ಲಭ್ಯವಾಗಿವೆ.

‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಮುಖ್ಯಸ್ಥರಾದ ಸಿಂಗ್ ಮತ್ತು ಅವರ 9 ಸಹಚರರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಅಸ್ಸಾಂನ ಜೈಲಿನಲ್ಲಿಡಲಾಗಿದೆ. ಅವರು ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.