ನವದೆಹಲಿ: ವೈದ್ಯರು ರೋಗಿಗಳಿಗೆ ಜೆನೆರಿಕ್ ಔಷಧಗಳನ್ನೇ ಶಿಫಾರಸು ಮಾಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೊಸ ನಿಯಮಾವಳಿಗಳಲ್ಲಿ ಹೇಳಲಾಗಿದೆ.

ಒಂದು ವೇಳೆ ಜೆನೆರಿಕ್ ಔಷಧ ಸೂಚಿಸಲು ವಿಫಲವಾಗಿದ್ದೇ ಆದಲ್ಲಿ ದಂಡ ವಿಧಿಸುವ ಹಾಗೂ ವೃತ್ತಿ ಪರವಾನಗಿಯನ್ನು ಅಮಾನತುಗೊಳಿಸುವ ಅವಕಾಶ ಹೊಸ ನಿಯಮದಲ್ಲಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ‘ನೋಂದಾಯಿತ ವೈದ್ಯರ ವೃತ್ತಿಪರ ನಡವಳಿಕೆಗೆ ಸಂಬಂಧಿಸಿದ ನಿಯಮಾವಳಿ’ಗಳಲ್ಲಿ ಬ್ರಾಂಡೆಡ್ ಔಷಧಿಗಳ ಬದಲಾಗಿ ಜೆನೆರಿಕ್ ಔಷಧಗಳನ್ನೇ ಸೂಚಿಸಬೇಕು ಎಂದು ಹೇಳಲಾಗಿದೆ.

‘ಜೆನೆರಿಕ್ ಔಷಧಗಳು ಬ್ರಾಂಡೆಡ್ ಔಷಧಗಳಿಗಿಂತ ಶೇ 30–80ರಷ್ಟು ಅಗ್ಗ. ಆದ್ದರಿಂದ, ಜೆನೆರಿಕ್ ಔಷಧಿಗಳನ್ನು ಶಿಫಾರಸು ಮಾಡುವುದರಿಂದ ವೆಚ್ಚವನ್ನು ಕಡಿಮೆ ಮಾಡಬಹುದು ಮತ್ತು ಗುಣಮಟ್ಟದ ಆರೈಕೆ ಪಡೆಯಬಹುದು’ ಎಂದು ಹೇಳಿದೆ.

ಎಲ್ಲಾ ನೋಂದಾಯಿತ ವೈದ್ಯರು, ಜೆನೆರಿಕ್ ಔಷಧಿಗಳನ್ನು ಶಿಫಾರಸು ಮಾಡಬೇಕು. ಔಷಧಗಳನ್ನು ತರ್ಕಬದ್ಧವಾಗಿ ಸೂಚಿಸಬೇಕು. ಅನಗತ್ಯ ಔಷಧಗಳು ಮತ್ತು ಅಸ್ಥಿರ-ಡೋಸ್ ಸಂಯೋಜನೆಯ ಮಾತ್ರೆಗಳನ್ನು ತಪ್ಪಿಸಬೇಕು’ ಎಂದು ಆಯೋಗ ಹೇಳಿದೆ.

ಈ ನಿಯಮ ಉಲ್ಲಂಘಿಸಿದರೆ ಎಚ್ಚರಿಕೆ ನೀಡಲಾಗುವುದು. ಪುನರಾವರ್ತನೆಯಾದರೆ ಪರವಾನಗಿ ರದ್ದು ಮಾಡಬಹುದು ಎಂದು ನಿಯಮದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.