ನವದೆಹಲಿ: ಮುಂದಿನ ಮೂರು ತಿಂಗಳಲ್ಲಿ ಪಿಎಂ ಕೇರ್ಸ್ ನಿಧಿಯಿಂದ ತೆಗೆದಿರಿಸಿರುವ ಹಣದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ದೇಶದಾದ್ಯಂತ 500 ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ತಿಳಿಸಿದ್ದಾರೆ.

ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್‌ಗಾಗಿ ಆನ್–ಬೋರ್ಡ್ ಆಮ್ಲಜನಕ ಉತ್ಪಾದನೆಗಾಗಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ವೈದ್ಯಕೀಯ ಆಮ್ಲಜನಕ ಘಟಕದಿಂದ ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಸಲಾಗುತ್ತಿದೆ‘ ಎಂದು ಸಚಿವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

‘ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಎಂಒಪಿ (ಮೆಡಿಕಲ್ ಆಕ್ಸಿನ್ ಪ್ಲಾಂಟ್) ತಂತ್ರಜ್ಞಾನವನ್ನು ಬೆಂಗಳೂರು ಮೂಲದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ ಲಿ. ಮತ್ತು ಕೊಯಮತ್ತೂರು ಮೂಲದ ಟ್ರೈಡೆಂಟ್ ನ್ಯುಮ್ಯಾಟಿಕ್ಸ್ ಕಂಪನಿಗಳಿಗೆ ವರ್ಗಾಯಿಸಲಾಗಿದೆ. ಈ ಎರಡು ಕಂಪನಿಗಳು 380 ಘಟಕಗಳನ್ನು ಸ್ಥಾಪಿಸಲಿವೆ. ಡೆಹ್ರಾಡೂನ್‌ನ ಭಾರತೀಯ ಪೆಟ್ರೋಲಿಯಂ ಇನ್‌ಸ್ಟಿಟ್ಯೂಟ್ (ಐಐಪಿ) ನೊಂದಿಗೆ ಕೆಲ ಮಾಡುತ್ತಿರುವ ಕೈಗಾರಿಕೆಗಳು ಸುಮಾರು 1 ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದಿಸುವಂತಹ 120 ಘಟಕಗಳನ್ನು ಸ್ಥಾಪಿಸಲಿವೆ‘ ಎಂದು ಡಿಆರ್‌ಡಿಒ ಹೇಳಿಕೆಯಲ್ಲಿ ತಿಳಿಸಿದೆ.

ಡಿಆರ್‌ಡಿಒ ಒಂದು ನಿಮಿಷಕ್ಕೆ 1 ಸಾವಿರ ಲೀಟರ್ ವೈದ್ಯಕೀಯ ಆಮ್ಲಜನಕ ಉತ್ಪಾದಿಸುವಂತಹ ಎಂಒಪಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನ ಬಳಸಿಕೊಂಡು ಸಿದ್ಧವಾಗುವ ಪ್ರತಿ ಘಟಕ ಸರಾಸರಿ ಒಂದು ನಿಮಿಷಕ್ಕೆ 5 ಲೀಟರ್‌ನಂತೆ 190 ರೋಗಿಗಳಿಗೆ ಆಮ್ಲಜನಕ ಪೂರೈಸಲಿದೆ. ಒಂದು ದಿನಕ್ಕೆ 195 ಸಿಲಿಂಟರ್‌ಗಳಷ್ಟು ಆಮ್ಲಜನಕ ಉತ್ಪಾದಿಸಬಹುದಾಗಿದೆ‘ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಕೋವಿಡ್–19: ಸಿಂಗಾಪುರದಿಂದ ಮೊದಲ ಹಂತದ ಆಕ್ಸಿಜನ್ ಸಿಲಿಂಡರ್ಗಳು ಭಾರತಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.