ನವದೆಹಲಿ: ‘ಪಾಕಿಸ್ತಾನದ ಕಡೆಯಿಂದ ಗಡಿ ದಾಟಿ ಬರುವ ಡ್ರೋನ್ಗಳ ಸಂಖ್ಯೆ 2022ರಲ್ಲಿ ದುಪ್ಪಟ್ಟು ಆಗಿದ್ದು ಮಾದಕವಸ್ತುಗಳು, ಶಸ್ತ್ರಾಸ್ತ್ರಗಳನ್ನು ವಾಯುಮಾರ್ಗದಲ್ಲಿ ಸಾಗಿಸುವ ನಿದರ್ಶನಗಳು ಹೆಚ್ಚಿವೆ’ ಎಂದು ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಪ್ರಧಾನ ನಿರ್ದೇಶಕ ಪಂಕಜ್ ಕುಮಾರ್ ಸಿಂಗ್ ಹೇಳಿದ್ದಾರೆ.

ಡ್ರೋನ್ ಚಲನವಲನ ಗುರುತಿಸಲು ಬಿಎಸ್ಎಫ್ ಅತ್ಯಾಧುನಿಕ ಪ್ರಯೋಗಾಲಯವನ್ನು ದೆಹಲಿಯ ತನ್ನ ಶಿಬಿರದಲ್ಲಿ ಇತ್ತೀಚಿಗೆ ಸ್ಥಾಪಿಸಿದೆ. ಇದರ ಫಲಿತಾಂಶವೂ ಸಕಾರಾತ್ಮಕವಾಗಿವೆ. ವಾಯುಮಾರ್ಗದ ಚಲನವಲನ ಹಾಗೂ ಕ್ರಿಮಿನಲ್ಗಳು ಭಾಗಿಯಾಗಿದ್ದಾರೆಯೇ ಎಂದು ಗುರುತಿಸುವುದು ಸಾಧ್ಯವಾಗಲಿದೆ ಎಂದು ಶನಿವಾರ ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ಡ್ರೋನ್ ಬಳಕೆಯ ಪಿಡುಗು ಹೆಚ್ಚಿದ್ದು, ಇದರ ಬಳಕೆ ಹೆಚ್ಚಿನ ಸಮಸ್ಯೆಗಳಿಗೆ ಆಸ್ಪದವಾಗಿದೆ. ಅನಾಮಿಕರಾಗಿ ಇರಬಹುದು ಹಾಗೂ ಎತ್ತರದ ಮಾರ್ಗದಲ್ಲಿ ಸುಲಭವಾಗಿ ಗಡಿದಾಟಬಹುದು ಎಂಬ ಕಾರಣಕ್ಕೆ ಡ್ರೋನ್ಗಳ ಬಳಕೆಯು ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವೆಬಿನಾರ್ ಮೂಲಕ ಪ್ರಯೋಗಾಲಯ ಉದ್ಘಾಟನೆ ಸಂದರ್ಭದಲ್ಲಿ ಡಿಜಿ ಅವರು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರಿಗೆ ಈ ಕುರಿತು ವಿವರಗಳನ್ನು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.