ಮುಂಬೈ: ರಾಜ್ಯಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ಶರದ್ ಪವಾರ್ ಬಣಕ್ಕೆ ಫೆ. 7ರೊಳಗೆ ಹೊಸ ಹೆಸರು ಸೂಚಿಸಲು ಚುನಾವಣಾ ಆಯೋಗವು ವಿಶೇಷ ಅವಕಾಶವನ್ನು ಮಂಗಳವಾರ ಕಲ್ಪಿಸಿದೆ.

ಆ ಮೂಲಕ ಅಜಿತ್ ಪವಾರ್ ಬಣವೇ ನಿಜವಾದ ಎನ್ಸಿಪಿ ಎಂದು ಚುನಾವಣಾ ಆಯೋಗ ಅಧಿಕೃತಗೊಳಿಸಿದೆ. ಇದು ಶರದ್ ಪವಾರ್ ಬಣಕ್ಕೆ ದೊಡ್ಡ ಹಿನ್ನೆಡೆಯಾಗಿದೆ ಎಂದೆನ್ನಲಾಗಿದೆ.

ಕಳೆದ ಜುಲೈ 2ರಂದು ಕಳೆದವರ್ಷ ಜುಲೈನಲ್ಲಿ ಎನ್ಸಿಪಿ ಇಬ್ಭಾಗವಾಯಿತು. ಪಕ್ಷದ ನಾಯಕ ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರು ಏಕನಾಥ ಶಿಂದೆ ನೇತೃತ್ವದ ಸರ್ಕಾರವನ್ನು ಸೇರಿದರು. ಆಗಿನಿಂದಲೂ, ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಉಭಯ ಬಣಗಳು ಹಕ್ಕು ಮಂಡಿಸಿವೆ. ಜೊತೆಗೆ, ಎದುರಾಳಿ ಬಣಕ್ಕೆ ನಿಷ್ಠರಾಗಿರುವವರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್ಗೆ ಅರ್ಜಿ ಸಲ್ಲಿಸಿದ್ದವು.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್ಸಿಪಿಯನ್ನು ಸದ್ಯ ಒಂದು ಬಣವಾಗಿ ಗುರುತಿಸಲಾಗುತ್ತಿದೆ. ಎನ್ಸಿಪಿ ಪಕ್ಷ ವಿಭಜನೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಅರ್ಜಿಗಳು ಸುಪ್ರೀಂ ಕೋರ್ಟ್ ಹಾಗೂ ಚುನಾವಣಾ ಆಯೋಗದಲ್ಲಿ ವಿಚಾರಣೆ ಹಂತದಲ್ಲಿವೆ.
.NCP: ಸಭಾಧ್ಯಕ್ಷರಿಗೆ ಪ್ರತಿಕ್ರಿಯೆ ಸಲ್ಲಿಸಿದ ಅಜಿತ್, ಶರದ್ ಬಣದ ಸಂಖ್ಯೆ ಇಷ್ಟು...ಕೊನೇ ಚುನಾವಣೆ ಎಂಬುದು ಭಾವನಾತ್ಮಕ ತಂತ್ರ: ಶರದ್ ಪವಾರ್ ವಿರುದ್ಧ ಅಜಿತ್ ಟೀಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.