ನವದೆಹಲಿ: ಬಿಹಾರದ ಮುಜಫ್ಫರಪುರದಲ್ಲಿ ಕಾಣಿಸಿಕೊಂಡಿರುವ ಮಿದುಳು ಜ್ವರದಿಂದ (ಅಕ್ಯೂಟ್ ಎನ್ಸೆಫ್ಯಾಲೈಟಿಸ್ ಸಿಂಡ್ರೋಮ್– ಎಇಎಸ್) ಬಾಧಿತವಾಗಿರುವ ಮಕ್ಕಳಿಗೆ ಚಿಕಿತ್ಸೆ ನೀಡಲು ತಜ್ಞವೈದ್ಯರ ತಂಡವನ್ನು ತುರ್ತಾಗಿ ರಚಿಸಲು ಕೇಂದ್ರಕ್ಕೆ ಸೂಚನೆ ನೀಡಬೇಕು ಎಂಬ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಬುಧವಾರ ಸಮ್ಮತಿಸಿದೆ.

ಈ ಕಾಯಿಲೆಯಿಂದ ಈವರೆಗೆ 100ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ವಕೀಲ ಮನೋಹರ್ ಪ್ರತಾಪ್ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಜೂನ್ 24ಕ್ಕೆ ನಡೆಸಲಾಗುವುದು ಎಂದು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಸೂರ್ಯಕಾಂತ ಅವರನ್ನು ಒಳಗೊಂಡ ರಜಾಕಾಲದ ನ್ಯಾಯಪೀಠ ಹೇಳಿದೆ.

‘100ಕ್ಕೂ ಅಧಿಕ ಮಕ್ಕಳು ಮೃತಪಟ್ಟಿರುವುದು ಅಗಾಧ ನೋವು ತಂದಿದೆ. ಬಹುತೇಕ ಮಕ್ಕಳು 1ರಿಂದ 10 ವರ್ಷದ ಒಳಗಿನವರು ಎಂಬುದು ಕಳವಳಕಾರಿ’ ಎಂದು ವಕೀಲ ಮನೋಹರ್ ಅರ್ಜಿಯಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.