ಅಹಮದಾಬಾದ್: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮತ್ತು ಸಾರ್ವಜನಿಕರಿಗೆ ಕಾಣುವಂತಹ ಖಾಸಗಿ ಸ್ಥಳದಲ್ಲಿ ಪ್ರಾಣಿ ಬಲಿ ನಿಷೇಧಿಸಿ ಸೂರತ್ ಮತ್ತು ಅಹಮದಾಬಾದ್ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಅಹಮದಾಬಾದ್ ಪೊಲೀಸ್ ಆಯುಕ್ತ ಆಶಿಷ್ ಭಾಟಿಯಾ ಮತ್ತು ಸೂರತ್ ಪೊಲೀಸ್ ಆಯುಕ್ತಆರ್. ಬಿ.ಬ್ರಹ್ಮಭಟ್ ಅವರು ಹೊರಡಿಸಿರುವ ಅಧಿಸೂಚನೆಗಳು ಒಂದೇ ರೀತಿಯ ವಿಷಯಗಳನ್ನು ಹೊಂದಿದ್ದು, ಸಿಆರ್ಪಿಸಿಯ 144ರ ಕಾಯ್ದೆಯಡಿ ಸಾರ್ವಜನಿಕ ಸ್ಥಳ ಮತ್ತು ಸಾರ್ವಜನಿಕರಿಗೆ ಕಾಣಿಸುವಂತಹ ಖಾಸಗಿ ಸ್ಥಳದಲ್ಲಿ ಪ್ರಾಣಿ ವಧೆ(ಬಲಿ) ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.

ಈ ರೀತಿಯ ಆಚರಣೆ ಇತರರ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಹುದು. ಇದರಿಂದ ಕೋಮು ಗಲಭೆ ಉಂಟಾಗಬಹುದು. ಹಾಗಾಗಿ ಕೊರೊನಾದಂತಹ ಪರಿಸ್ಥಿತಿಯಲ್ಲಿ ಪ್ರಾಣಿ ಬಲಿ ನಿಷೇಧ ಅಗತ್ಯ. ಅಲ್ಲದೆ ಪ್ರಾಣಿಗಳನ್ನು ಅಲಂಕರಿಸಿ ಅವುಗಳ ಮೆರವಣಿಗೆ ನಡೆಸುವುದಕ್ಕೂ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಲಾಗಿದೆ.

ಹಬ್ಬದ ಆಚರಣೆ ವೇಳೆ ಜನರು ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು. ಜನರು ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.