ಚಂಡೀಗಡ: ಹರಿಯಾಣದಲ್ಲಿ ಬುಧವಾರದಂದು ವಿಶ್ವಾಸಮತ ಸಾಬೀತುಪಡಿಸಿರುವ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರವನ್ನು ಭದ್ರಪಡಿಸಿದ್ದಾರೆ.

ಬಿಜೆಪಿ-ಜೆಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಆದರೆ ಈಗ ಅವಿಶ್ವಾಸ ಮತದಲ್ಲಿ ಸೋಲು ಅನುಭವಿಸುವ ಮೂಲಕ ಕಾಂಗ್ರೆಸ್ ಮುಖಭಂಗ ಎದುರಿಸಿದೆ.

ವಿಧಾನಸಭೆಯಲ್ಲಿ ಸರ್ಕಾರದ ಪರ 55 ಶಾಸಕರು ಮತ ಚಲಾಯಿಸಿದರೆ 32 ಮಂದಿ ವಿರೋಧಿಸಿದರು.

ಸದನದಲ್ಲಿ ಆರು ತಾಸು ನಡೆದ ಸುದೀರ್ಘ ಪ್ರಶ್ನಾವಳಿಯ ಬಳಿಕ ಸ್ಪೀಕರ್ ಗ್ಯಾನ್ ಚಾಂದ್ ಗುಪ್ತಾ ವಿಶ್ವಾಸಮತ ನಿರ್ಣಯ ಸ್ವೀಕರಿಸಿದರು.

ಅವಿಶ್ವಾಸ ನಿರ್ಣಯ ವಿರೋಧಿಸಿದ 55 ಶಾಸಕರ ಪೈಕಿ ಬಿಜೆಪಿಯಿಂದ 39 ಹಾಗೂ ಮಿತ್ರ ಪಕ್ಷ ಜನನಾಯಕ್ ಜನತಾ ಪಕ್ಷದಿಂದ 10, ಐವರು ಪಕ್ಷೇತರರು ಮತ್ತು ಹರಿಯಾಣ ಲೋಕಹಿತ್ ಪಕ್ಷದಿಂದ ಒಬ್ಬರು ಸದಸ್ಯರು ಸೇರಿದ್ದಾರೆ.

ಇದನ್ನೂ ಓದಿ:ಹರಿಯಾಣ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ಕಾಂಗ್ರೆಸ್ ಪರ 30 ಮತ್ತು ಇಬ್ಬರು ಪಕ್ಷೇತರರು ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಿದರು.

90 ಸದಸ್ಯರ ಹರಿಯಾಣ ವಿಧಾನಸಭೆಯಲ್ಲಿ ಪ್ರಸ್ತುತ ಸದಸ್ಯರ ಬಲಾಬಲ 88 ಆಗಿದ್ದು, ಆಡಳಿತರೂಢ ಬಿಜೆಪಿಯಲ್ಲಿ 40 ಶಾಸಕರು, ಜೆಜೆಪಿ 10 ಮತ್ತು ಕಾಂಗ್ರೆಸ್‌ನ 30 ಶಾಸಕರನ್ನು ಒಳಗೊಂಡಿದೆ. ಏಳು ಮಂದಿ ಪಕ್ಷೇತರರ ಪೈಕಿ ಐವರು ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ. ಲೋಕಹಿತ್ ಪಕ್ಷದ ಶಾಸಕರೂ ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ರೈತರ ಪ್ರತಿಭಟನೆ ನಡೆಯುತ್ತಿರುವಂತೆಯೇ ಹರಿಯಾಣದಲ್ಲಿ ಸರ್ಕಾರದ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.